Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ವತಿಯಿಂದ ಡಾಕ್ಟರ್‌ ಡೇ ಸೆಲೆಬ್ರೇಷನ್‌ ಕಾರ್ಯಕ್ರಮ ಆಯೋಜನೆ

ಮೈಸೂರು: ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಜಯಲಕ್ಷ್ಮೀಪುರಂ ಇವರ ವತಿಯಿಂದ ಡಾಕ್ಟರ್‌ ಡೇ ಸೆಲೆಬ್ರೇಷನ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಬೋಗಾದಿಯ ಎರಡನೇ ಹಂತದಲ್ಲಿರುವ ದ ಕಬಾನ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಖ್ಯಾತ ವೈದ್ಯರಾದ ಡಾ.ಎಸ್.ರವಿಶಂಕರ್‌ ಹಾಗೂ ವೇದಿಕೆ ಮೇಲಿದ್ದ ಗಣ್ಯರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಡಾ.ರವಿಶಂಕರ್‌ ಅವರಿಗೆ ಪೇಟ, ಶಾಲು ಹಾಗೂ ಹಾರ ಹಾಕಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ರವಿಶಂಕರ್‌ ಅವರು, ಲಯನ್ಸ್‌ ಕ್ಲಬ್‌ ಜಯಲಕ್ಷ್ಮೀಪುರಂಗೆ ಧನ್ಯವಾದ ತಿಳಿಸಿದರು. ಡಾಕ್ಟರ್‌ ಎಕ್ಸ್‌ಟ್ರಾಡೀನರಿ ಅವಾರ್ಡ್‌ ಪಡೆದಿದ್ದು ತುಂಬಾ ಸಂತೋಷವಾಗಿದೆ. ಇದಕ್ಕೆಲ್ಲಾ ಲಯನ್ಸ್‌ ಕ್ಲಬ್‌ ಜಯಲಕ್ಷ್ಮೀಪುರಂ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು. ಭಾಷಣದುದ್ದಕ್ಕೂ ಲಯನ್ಸ್‌ ಕ್ಲಬ್‌ನ ಸಾಧನೆಯನ್ನು ಹಾಡಿ ಹೊಗಳಿದ ಅವರು, ಈ ಪ್ರಶಸ್ತಿ ಬರಲು ಏನೆಲ್ಲಾ ಶ್ರಮ ಪಟ್ಟರು ಎಂಬುದನ್ನು ನೆರೆದಿದ್ದ ಜನರಿಗೆ ವಿವರಿಸಿದರು. ಈ ಪ್ರಶಸ್ತಿಯನ್ನು ನಾನು ನನ್ನ ಬಳಿ ಚಿಕಿತ್ಸೆ ಪಡೆದ ಜನರು, ನನ್ನ ಸಿಬ್ಬಂದಿ ವರ್ಗ ಸೇರಿದಂತೆ ಎಲ್ಲರಿಗೂ ಡೆಡಿಕೇಟ್‌ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಲಯನ್‌ ದಿನೇಶ್‌, ಲಯನ್ ಮೋಹನ್‌ ಕುಮಾರ್‌, ಲಯನ್‌ ನಂದ ಕುಮಾರ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

 

Tags: