Mysore
34
scattered clouds

Social Media

ಸೋಮವಾರ, 11 ಮೇ 2026
Light
Dark

ರಾತ್ರಿ ವೇಳೆ ಸಿಂಗಲ್‌ ಫೇಸ್‌ ಕೃಷಿ ಪಂಪ್‌ಸೆಟ್‌ ಬಳಸಬೇಡಿ: ರೈತರಿಗೆ ಚೆಸ್ಕಾಂ ಮನವಿ

ಕೆ.ಬಿ.ರಮೇಶ್ ನಾಯಕ 

ಮೈಸೂರು: ರಾತ್ರಿ ವೇಳೆ ಸಿಂಗಲ್‌ ಫೇಸ್‌ ಕೃಷಿ ಪಂಪ್‌ಸೆಟ್‌ ಬಳಸಬೇಡಿ. ಇದರಿಂದ ತೋಟದ ವಾಸಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಅನ್ನದಾತರಿಗೆ ಚೆಸ್ಕಾಂ ಮನವಿ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ನಿತ್ಯ ಸಂಜೆ ಆರು ಗಂಟೆಯಿಂದ ಬೆಳಿಗ್ಗೆವರೆಗೆ ನೀರಾವರಿ ಫೀಡರ್‌ಗಳ ಮೂಲಕ ತೋಟದ ಮನೆಗಳ ಗೃಹ ಬಳಕೆಗೆ ಹಾಗೂ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳಿಗಾಗಿ ಸಿಂಗಲ್‌ ಫೇಸ್‌ ವಿದ್ಯುತ್ತನ್ನು ಓಪನ್‌ ಡೆಲ್ಟ ಮೂಲಕ ನೀಡಲಾಗುತ್ತಿದೆ. ಈ ಸಮಯದಲ್ಲಿ ಸಿಂಗಲ್‌ ಫೇಸ್‌ ಕೃಷಿ ಪಂಪ್‌ಸೆಟ್‌ಗಳನ್ನು ಬಳಸಬಾರದು ಎಂದು ರೈತರಿಗೆ ಮನವಿ ಮಾಡಲಾಗುತ್ತಿದೆ. ಹೀಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಸುವಾಗ ಕೆಲವರು ಕೃಷಿ ಪಂಪ್‌ಸೆಟ್‌ಗಳನ್ನು ನೀರಾವರಿ ಫೀಡರ್‌ ಮೂಲಕ ಬಳಸುತ್ತಿದ್ದು, ಇದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದಾಗಿ ಕಾಡಂಚಿನ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಈ ಸಮಯದಲ್ಲಿ ಸಿಂಗಲ್‌ ಫೇಸ್‌ ಕೃಷಿ ಪಂಪ್‌ಸೆಟ್ ಬಳಸದಂತೆ ಮನವಿ ಮಾಡಲಾಗಿದೆ. ಒಂದು ವೇಳೆ ರಾತ್ರಿ ವೇಳೆಯಲ್ಲಿ ಸಿಂಗಲ್‌ ಫೇಸ್‌ನಲ್ಲಿ ಪಂಪ್‌ಸೆಟ್‌ಗಳು ಚಾಲನೆ ಮಾಡಿ ಫೀಡರ್‌ ಟ್ರಿಪ್‌ ಆಗುವುದರಿಂದ ವಿದ್ಯುತ್‌ ವ್ಯತ್ಯಯವಾದಲ್ಲಿ ನಿಗಮವು ಜವಾಬ್ದಾರಿಯಾಗಿರುವುದಿಲ್ಲ. ಆದ್ದರಿಂದ ರಾತ್ರಿ ವೇಳೆಯಲ್ಲಿ ಸಿಂಗಲ್‌ ಫೇಸ್‌ನಲ್ಲಿ ಪಂಪ್‌ಸೆಟ್‌ಗಳನ್ನು ಚಾಲನೆಗೊಳಿಸಬಾರದು ಎಂದು ರೈತರಿಗೆ ಮನವಿ ಮಾಡಿದೆ.

 

Tags:
error: Content is protected !!