ಮೈಸೂರು: ಹೈಕಮಾಂಡ್ ಹೇಳಿದೆ ಎಂಬ ನೆಪವೊಡ್ಡಿ ಮತ್ತೊಮ್ಮೆ ಜಾತಿಗಣತಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ವಿರೋಧಕ್ಕೆ ಮರು ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೆಯ ಜಾತಿಗಣತಿ ಸರ್ವೇಯಿಂದ ನೂರಾರು ಕೋಟಿ ಹಣ ಪೋಲಾಗಿದೆ. ಈ ಹಿಂದೆಯೇ ಲಿಂಗಾಯತರು ಹಾಗೂ ಒಕ್ಕಲಿಗರು ಜಾತಿಗಣತಿಗೆ ಒಪ್ಪಿರಲಿಲ್ಲ.
10 ವರ್ಷ ಹಳೆಯ ಗಣತಿ ಇದು. ಅಂಕಿ ಅಂಶಗಳು ಸರಿಯಿಲ್ಲ ಎಂದು ಹೇಳಿದ್ದೆವು. ಆದರೆ ನಾವು ಇದೇ ಜಾತಿಗಣತಿ ಬಿಡುಗಡೆ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಹೈಕಮಾಂಡ್ ಹೇಳಿದೆ ಎಂದು ಮತ್ತೊಮ್ಮೆ ಗಣತಿ ಮಾಡಲು ಹೊರಟಿದ್ದಾರೆ. ಇದಕ್ಕೆ ಹಣ ಎಲ್ಲಿಂದ ತರುತ್ತಾರೆ?. ಮ್ಯಾನ್ ಪವರ್ ಎಲ್ಲಿಂದ ಮಾಡ್ತಾರೆ.? ರಾಜ್ಯದ ಜನರಲ್ಲಿ ಗೊಂದಲ ಮೂಡಿಸಲು ಸಿಎಂ ಹೊರಟಿದ್ದು, ಜನರನ್ನು ಡೈವರ್ಟ್ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.




