Mysore
19
overcast clouds
Light
Dark

ಮೊದಲನೇ ಆಷಾಡ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ವಿತರಣೆ

ಮೈಸೂರು : ಪ್ರತಿ ವರ್ಷದಂತೆ ಈ ವರ್ಷವು ಕೂಡ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಆಗಮಿಸಿದ್ದು, ಮುಂಜಾನೆಯೇ ಸರತಿ ಸಾಲಿನಲ್ಲಿ ನಿಂತು ತಾಯಿ ಚಾಮುಂಡೇಶ್ವರಿಯ  ದರ್ಶನ ಪಡೆದು ತಾಯಿಗೆ ವಿಶೇಷವಾದ ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.

ಇನ್ನು ಆಷಾಢ ಶುಕ್ರವಾರ ಪ್ರಯುಕ್ತ ಇಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ವಿಶೇಷ ಪೂಜೆಗಾಗಿ ೨೫ ಸಾವಿರ ಮೈಸೂರು ಪಾಕ್‌ ತಯಾರಿಸಲಾಗಿದೆ.  ಬೆಳಗ್ಗೆ ೬ ಗಂಟೆಯಿಂದ ಸಾಯಂಕಾಲ ೪ ಗಂಟೆವರೆಗೂ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ.

ಇನ್ನು ಈ ಮೈಸೂರು ಪಾಕ್‌ ಅನ್ನು ೪೦ ಜನ ಬಾಣಸಿಗರಿಂದ ತಯಾರಿಸಲಾಗಿದ್ದು, ಮೈಸೂರು ಪಾಕ್‌ ಗೆ ೨೦೦ ಕೆಜಿ ಕಡ್ಲೆಹಿಟ್ಟು, ೫೦೦ ಕೆಜಿ ಸಕ್ಕರೆ, ೩೦ ಲೀಟರ್‌ ಎಣ್ಣೆ, ೧೦೦ ಕೆಜಿ ತುಪ್ಪ, ೧೦೦ ಕೆಜಿ ಬೆಣ್ಣೆ ಕಾಯಿಸಿದ ತುಪ್ಪ, ೩ ಕೆಜಿ ಏಲಕ್ಕಿ, ೨ ಕೆಜಿ ಅಡುಗೆ ಅರಿಶಿಣ ಬಳಸಲಾಗಿದೆ.