ಮೈಸೂರು: ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವುದು ಹೊಸದೇನಲ್ಲ ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಒಳ್ಳೆಯ ಕಾರ್ಯಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಮ್ಮ ಊರಿನ ಕಡೆ ಅನೇಕ ಸಂಘ ಸಂಸ್ಥೆಗಳ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಏನೋ ಆಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ. ಘಟನೆಗಳು ನಡೆದಿದ್ರೆ ತನಿಖೆಯಿಂದ ಹೊರ ಬರುತ್ತದೆ. ಅದಕ್ಕೂ ಮೊದಲೇ ಕಾಮೆಂಟ್ ಮಾಡೋದು ಸರಿಯಲ್ಲ. ಷಡ್ಯಂತ್ರದ ಹಿಂದೆ ಒಂದಷ್ಟು ಕಾಣದ ಕೈಗಳಿವೆ. ಹಿಂದೂ ದೇವಾಲಯಗಳ ಟಾರ್ಗೆಟ್ ಹೊಸದಲ್ಲ.
ಇದನ್ನೂ ಓದಿ: ಸೂರಜ್ ಆಪ್ತ ಶಿವಕುಮಾರ್ ವಿರುದ್ಧ 2 ಕೋಟಿ ಆಮಿಷದ ದೂರು ದಾಖಲಿಸಿದ ಸಂತ್ರಸ್ತ
ಈ ಹಿಂದೆ ನನ್ನ ಮೇಲು ಪಿತೂರಿ ಮಾಡಿದ್ದರು. ಆನೆ ರೀತಿ ಎಲ್ಲವನ್ನೂ ತುಳಿದು ನಡೆಯಬೇಕು. ಧರ್ಮ ಉಳಿಯುತ್ತೆ ಸತ್ಯ ಹೊರ ಬರುತ್ತದೆ ಎಂದು ಹೇಳಿದರು.
ಇನ್ನು ದಸರಾ ಉದ್ಘಾಟನೆ ಕುರಿತು ವಿವಾದ ಸೃಷ್ಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರ ಭಾನು ಮುಷ್ತಾಕ್ ಜೊತೆ ದೀಪಾ ಬಸ್ತಿಯನ್ನು ಆಯ್ಕೆ ಮಾಡಬೇಕಿತ್ತು. ಒಬ್ಬರನ್ನು ಕರೆದು ಇನ್ನೊಬ್ಬರನ್ನು ಬಿಟ್ಟಿದ್ದು ಸರಿಯಲ್ಲ. ಭಾರತ ಯೋಗಿಗಳ ನಾಡು ಯೋಗದ ನಾಡು. ಎಲ್ಲಾ ಧರ್ಮವನ್ನು ಗೌರವಿಸಬೇಕು. ನಮ್ಮ ಧರ್ಮವನ್ನು ಮೊದಲು ಗೌರವಿಸಬೇಕು ಪ್ರೀತಿಸಬೇಕು. ನಾನು ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ. ನಮ್ಮ ಧರ್ಮ ನಮಗೆ ಮೊದಲು ಎಂದು ಹೇಳಿದರು.





