Mysore
21
haze

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಸಿಎಂ ಆಗಿದ್ದಾಗಲೇ ಚನ್ನಪಪಟ್ಟಣದ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದೆ : ಡಿಕೆಶಿಗೆ ಎಚ್ಡಿಕೆ ಕೌಂಟರ್‌

ಮಂಡ್ಯ : ನಾನು ಸಿಎಂ ಆಗಿದ್ದಾಗಲೇ ಚನ್ನಪಪಟ್ಟಣದ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದೆ ಎಂದು ಡಿ.ಕೆ.ಶಿವಕುಮಾರ್‌ ಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕೌಂಟರ್‌ ಕೊಟ್ಟಿದ್ದಾರೆ.

ನಗರದಲ್ಲಿ ಚನ್ನಪಟ್ಟಣವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಹತ್ತು ದಿನಗಳಿಂದ ಚನ್ನಪಟ್ಟಣಕ್ಕೆ ಹೋಗಿ ಡಿಕೆಶಿ ನೀಡುತ್ತಿರುವ ಹೇಳಿಕೆಗಳನ್ನ ಗಮನಿಸಿದ್ದೇನೆ. ಸತ್ಯಗಾಲ ಮತ್ತು ಸಣ್ಣ ನೀರಾವರಿ ಯೋಜನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಅದು ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದ ಯೋಜನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಶೇಕಡ ೯೦ ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಮತ್ತು ಶಾಲೆಗಳಿಗೂ ಕಾಯಕಲ್ಪ ನೀಡಲಾಗಿದೆ.  ನಗರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೂಡ ಕಂಡುಕೊಳ್ಳಲಾಗಿದೆ. ಮನೆಗಳು ನೀಡದಿರುವ ಬಗ್ಗೆ ಮಾತನಾಡುತ್ತಾರೆ. ಶಾಸಕನಾಗಿ ತಾನು ಮನೆಗಳನ್ನ ನೀಡಲು ಸಾಧ್ಯವೇ. ಅದು ಸರ್ಕಾರದ ಕೆಲಸ ಎಂದು ಲೇವಡಿ ಮಾಡಿದರು.

ಅಲ್ಲದೆ ಹಿಂದೆ ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ವಸತಿ ಯೋಜನೆಗಾಗಿ ೨೮೦೦೦ ಕೋಟಿ ಬಿಡುಗಡೆ ಮಾಡಿದ್ದರು. ಆದರೆ ನಂತರ ಬಂದ ಸರ್ಕಾರಗಳು ಯೋಜನೆಗಳನ್ನ ಕಾರ್ಯಗತಗೊಳಿಸಲಿಲ್ಲ ಎಂದು ಹೇಳಿದರು.

Tags:
error: Content is protected !!