Mysore
31
scattered clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತ : ಯದುವೀರ್ ಆರೋಪ

ಮೈಸೂರು : ಕಾಂಗ್ರೆಸ್ ಪಕ್ಷದೊಳಗಿನ ಮುಖ್ಯಮಂತ್ರಿ ಕುರ್ಚಿ ಕಾದಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕುರ್ಚಿ ಕಾದಾಟ ಕಾಂಗ್ರೆಸ್ ಆಂತರಿಕ ವಿಚಾರ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮದವರು ಏನು ಹೇಳುತ್ತಾರೆ ಅಷ್ಟೇ ಗೊತ್ತಿರುವುದು. ಆದರೆ, ಕಾದಾಟದಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ತಿ.ನರಸೀಪುರದಲ್ಲಿ ಕೆಎಸ್‌ಐಸಿ ಭೂಮಿಯನ್ನು ಕ್ರೀಡಾಂಗಣಕ್ಕೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಕೆಎಸ್‌ಐಸಿ ಜಾಗವನ್ನು ಕೆಎಸ್‌ಐಸಿ ಅಭಿವೃದ್ಧಿಗೆ ಬಳಸಬೇಕು. ಇದು ನಮ್ಮ ಒತ್ತಾಯ, ಈ ಬಗ್ಗೆ ನಮ್ಮ ಹೋರಾಟ ಮಾಡುತ್ತೇವೆ ಎಂದರು.

Tags:
error: Content is protected !!