ಮೈಸೂರು: ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಎಚ್ಡಿಕೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತ ಬಗ್ಗೆ ದಿನನಿತ್ಯವೂ ಪತ್ರಿಕೆ ಓದಿ ತಿಳಿದುಕೊಳ್ಳುತ್ತೇನೆ. ಇಲ್ಲಿ ಯಾವ ರೀತಿ ಆಡಳಿತ ನಡೆಯುತ್ತಿದೆ ಎಂದು ಗಮನಿಸುತ್ತಿದ್ದೇನೆ. ಆದ್ರೆ ಸತ್ಯ ಹೇಳೋದಕ್ಕೆ ಆಗಲ್ಲ ರಿಯಾಕ್ಟ್ ಮಾಡಲ್ಲ. ಈಗ ರಿಯಾಕ್ಟ್ ಮಾಡುವ ಸಮಯವೂ ಅಲ್ಲ. ಆದ್ರೆ ಒಂದು ಮಾತು ಹೇಳುತ್ತೇನೆ ನನಗೇನಾದರೂ ದೇವರು ಆಯಸ್ಸು ಕೊಟ್ರೆ ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಿ ಕುಮಾರಸ್ವಾಮಿ ನಾಯಕತ್ವಕ್ಕೆ ಬಲ ತುಂಬುತ್ತೇನೆ.
ನಮ್ಮ ಪಕ್ಷಕ್ಕೆ ಕುಮಾರಸ್ವಾಮಿ ನಾಯಕತ್ವ ಬೇಕು. ಅವ್ರಿಗೆ ಶಕ್ತಿ ತುಂಬಬೇಕು ನನ್ನ ಕೈನಲ್ಲಿ ಎಷ್ಟು ಸಾಧ್ಯ ನಮ್ಮ ಮುಖಂಡರ ಕೈನಲ್ಲಿ ಎಷ್ಟು ಸಾಧ್ಯ ಅಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಅದಕ್ಕಾಗಿ ಸಭೆ ಮಾಡುತ್ತೇವೆ. ನಿಖಿಲ್ ಕುಮಾರಸ್ವಾಮಿ ಗೂ ಶಕ್ತಿ ತುಂಬುವ ಕೆಲಸ ಮಾಡ್ತೀವಿ ಎಂದರು.
ಇನ್ನೂ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಕೈ ಮಾಡಲು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಆನಂದವಾಗಿ ನಿದ್ರೆ ಮಾಡಿಕೊಂಡು ಬೆಂಗಳೂರಿನಿಂದ ಬಂದಿದ್ದೇನೆ. ರಾಜ್ಯದ ರಾಜಕಾರಣ ಬಗ್ಗೆ ಆಗಲಿ, ಸಿಎಂ ಬಗ್ಗೆ ಆಗಲಿ, ಕಾಂಗ್ರೆಸ್ ಅಧ್ಯಕ್ಷ ಡಿಸಿಎಂ ಬಗ್ಗೆ ಯಾರ ಬಗ್ಗೆಯೂ ನಾನು ಏನು ಮಾತನಾಡಲ್ಲ ಎಂದರು.





