Mysore
24
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ ಸಂಸದ ಯದುವೀರ್‌ ಒಡೆಯರ್‌

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಹೆಸರೇ ಖುದ್ದು ಹಗರಣದಲ್ಲಿ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಸೂಕ್ತ ತನಿಖೆಯಾಗಬೇಕು. ಅಲ್ಲದೇ ನಿವೇಶನಗಳನ್ನು ವಾಪಾಸ್‌ ನೀಡಿರುವುದನ್ನು ನೋಡಿದರೆ ತಾನು ತಪ್ಪು ಮಾಡಿದ್ದೇನೆಂದು ಅರ್ಥೈಸಿಕೊಂಡು ಸೈಟ್‌ಗಳನ್ನು ಹಿಂದಿರುಗಿಸಿರುವಂತಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ನಿವೇಶನಕ್ಕೆ ಇರುವ ಮೌಲ್ಯಕ್ಕಿಂತಲೂ ಐದಾರು ಪಟ್ಟು ಹಣ ಕೇಳಿದ್ದರು. 14 ನಿವೇಶನ ಪ್ರಕರಣಗಳಲ್ಲಿ ನೇರವಾಗಿ ದುರಾಡಳಿತ ಮತ್ತು ತಪ್ಪು ಮಾಡಿದ್ದಾರೆ. ಈ ವಿಚಾರವಾಗಿ ಸಿಎಂ ಹುದ್ದೆಗೆ ಕಪ್ಪುಚುಕ್ಕೆ ಬರುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು.

Tags: