ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಸಮೀಪ ಗಲಾಟೆಗೆ ಕಾರಣನಾಗಿದ್ದ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗಗೆ ಒಂದು ದಿನ ಪೊಲೀಸ್ ಕಸ್ಟಡಿ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಇಂದು (ಫೆ.14) ಪೊಲೀಸರು ಆರೋಪಿ ಸತೀಶನನ್ನು ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಸರ್ಕಾರಿ ವಕೀಲೆ (ಎಪಿಪಿ) ಸವಿತಾ ಅವರು, ಆರೋಪಿಯನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲು ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ರರೋಶ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ಅ.ಮ.ಭಾಸ್ಕರ್ ಕೇವಲ ಮೂರು ಗಂಟೆ ಪೊಲೀಸ್ ಕಸ್ಟಡಿಗೆ ನೀಡುವಂತೆ ವಾದಿಸಿದರು.
ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿ, ಘಟನೆಗೆ ಸಂಬಧಿಸಿದಂತೆ ತನಿಖೆ ನಡೆಸಿ ಎಂದು ನ್ಯಾಯಾಧೀಶರಾದ ಸರೋಜ ಅವರು ಆದೇಶ ಹೊರಡಿಸಿದರು.





