Mysore
21
overcast clouds
Light
Dark

ಅರಮನೆ ನಗರಿಯಲ್ಲಿ ದಸರಾಗೆ ಸಕಲ ಸಿದ್ಧತೆ: ರಸ್ತೆಗಳ ದುರಸ್ತಿ ಕಾರ್ಯ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ.

ವಿಶ್ವವಿಖ್ಯಾತಿ ಪಡೆದಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮೈಸೂರಿನಲ್ಲಿ ಎಲ್ಲೆಡೆ ಸಿದ್ಧತೆ ನಡೆಯುತ್ತಿದ್ದು, ರಸ್ತೆ ದುರಸ್ತಿ, ವಿದ್ಯುತ್‌ ದೀಪ ಅಳವಡಿಕೆ, ರಸ್ತೆ ಬದಿ ಬಣ್ಣ ಬಳಿಯುವುದು ಸೇರಿದಂತೆ ಹಲವು ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಈಗಾಗಲೇ ಅನೇಕ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಳಿಸಲಾಗಿದೆ. ಇದರ ಜೊತೆಗೆ ದಸರಾ ವೈಭವ ಮರುಕಳಿಸಲೆಂದೇ ನಗರಗಳಲ್ಲಿರುವ ರಾಜಮಹಾರಾಜರು ಹಾಗೂ ಪ್ರಮುಖರ ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಗಿದೆ.

ಇನ್ನು ಅಲ್ಲಲ್ಲಿ ಒಳಚರಂಡಿ ದುರಸ್ತಿಗೊಳಿಸಲಾಗುತ್ತಿದ್ದು, ಪ್ರಮುಖ ಕಟ್ಟಡಗಳಿಗೆ ಬಣ್ಣ ಬಳಿಯಲಾಗಿದೆ. ಇನ್ನೂ ಹಲವು ಕಡೆ ಬಣ್ಣ ಬಳಿಯುವ ಕಾರ್ಯ ಪ್ರಗತಿಯಲ್ಲಿದೆ.

ಇನ್ನು ಅರಮನೆಯ ದರ್ಬಾರ್‌ ಹಾಲ್‌ ಸೇರಿದಂತೆ ಅರಮನೆಗೆ ಸುತ್ತ ಮುತ್ತ ಬಣ್ಣ ಬಳಿಯಲಾಗಿದ್ದು, ವಿದ್ಯುತ್‌ ದೀಪಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇನ್ನು 10 ದಿನದಲ್ಲಿ ಅರಮನೆ ಒಳಗೆ ದಸರಾ ಸಿದ್ಧತಾ ಕಾರ್ಯಗಳನ್ನು ಮುಗಿಸಲು ಅರಮನೆ ಮಂಡಳಿ ಕ್ರಮ ಕೈಗೊಂಡಿದೆ.

ಇನ್ನು ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗುತ್ತಿದ್ದು, ದಸರಾ ವೈಭವ ನೋಡಲು ಜನತೆ ಕಾತುರದಿಂದ ಕಾಯುತ್ತಿದ್ದಾರೆ.