ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸಾಂಸ್ಕೃತಿಕವಾಗಿ ಮಾಡಲಾಗುತ್ತಿದ್ದು, ಅದನ್ನು ಇಂಥವರೇ ಉದ್ಘಾಟನೆ ಮಾಡಬೇಕು ಅಂತೇನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹೈಪವರ್ ಕಮಿಟಿಯಲ್ಲಿ ನಾವು ತೀರ್ಮಾನ ಮಾಡಿದ್ದೇವೆ. ಬಾನು ಮುಷ್ತಾಕ್ ಬೂಕರ್ ಪ್ರಶಸ್ತಿ ವಿಜೇತೆಯಾಗಿದ್ದಾರೆ. ನಾಡಹಬ್ಬವನ್ನು ಇಂಥವರೇ ಉದ್ಘಾಟನೆ ಮಾಡಬೇಕು ಅಂತ ಇಲ್ಲ. ಇದು ಎಲ್ಲರ ಎಲ್ಲರ ಹಬ್ಬ. ಮಹಾರಾಜರ ಕಾಲದಿಂದಲೂ ಹಬ್ಬ ಆಗ್ತಿದೆ ಹೈದರಾಲಿ, ಟಿಪ್ಪು ಕಾಲದಲ್ಲೂ ದಸರಾ ಆಗಿದೆ. ವಿರೋಧ ಮಾಡುತ್ತಿರುವವರಿಗೆ ಇತಿಹಾಸ ಗೊತ್ತಿಲ್ಲ. ಬಿಜೆಪಿಯವರು ಜ್ಯಾತ್ಯಾತೀತವಾಗಿ ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕನ್ನಡತಾಯಿ ಬಗ್ಗೆ ಬಾನು ಮುಷ್ತಾಕ್ ಹೇಳಿಕೆ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರಿಗೆ ಕನ್ನಡದ ಬಗ್ಗೆ ಪ್ರೀತಿ ಇದೆ. ಅದಕ್ಕಾಗಿಯೇ ಪುಸ್ತಕಗಳನ್ನು ಬರೆದಿದ್ದಾರೆ. ಬಿಜೆಪಿ ಏನೋ ಕುಂಟು ನೆಪ ಹುಡುಕುತ್ತಿದೆ ಅಷ್ಟೇ. ನಾಡಹಬ್ಬ ಉದ್ಘಾಟನೆ ಎಲ್ಲರ ಹಬ್ಬ ಅಷ್ಟೇ ಎಂದರು.
ಇನ್ನು ಬಾನು ಮುಷ್ತಾಕ್ ದನ ತಿಂದು ಉದ್ಘಾಟನೆಗೆ ಬರುತ್ತಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವಾರು ದನ ತಿನ್ನೋದನ್ನ ಅಶೋಕ್ ನೋಡಿದ್ದಾರಾ? ಬಿಜೆಪಿಗರು ಡೋಂಗಿಗಳು ಅವರ ಮಾತುಗಳನ್ನು ಕೇಳಬಾರದು ಎಂದು ವಾಗ್ದಾಳಿ ನಡೆಸಿದರು.
ಇನ್ನು ಅರಮನೆ ಮುಂಭಾಗ ದೀಪಾ ಬಸ್ತಿಗೂ ಸನ್ಮಾನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ಇಬ್ಬರಿಗೂ ಸರ್ಕಾರದಿಂದ ಸನ್ಮಾನ ಮಾಡಿದ್ದೇವೆ. ದೀಪಾ ಬಸ್ತಿಗೂ ಕೂಡ ಸನ್ಮಾನ ಆಗುತ್ತೆ, ಮುಂದೆ ನೋಡೋಣ. ಆ ಬಗ್ಗೆಯೂ ಚರ್ಚೆ ಮಾಡ್ತೀನಿ ಎಂದರು.





