ಮೈಸೂರು: ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ.
ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಹೇಳಿದ ತಕ್ಷಣ ಅಪ್ಪ ಮಗ ಆಗಲ್ಲ, ಮಗ ಅಪ್ಪ ಆಗಲ್ಲ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ.
ಕೆಲವರು ವಿಷಯಾಂತರ ಮಾಡಿ ಇದನ್ನು ರಾಜಕೀಯವಾಗಿ ಮುನ್ನೆಲೆಗೆ ಬಿಡುತ್ತಿದ್ದು, ಪಹಲ್ಗಾಮ್ ವಿಚಾರ, ಆಪರೇಷನ್ ಸಿಂಧೂರ ಚರ್ಚೆ ಆಗಬಾರದು ಎಂದು ಪ್ಲಾನ್ ಮಾಡುತ್ತಿದ್ದಾರೆ. ಕನ್ನಡ, ತಮಿಳು ಅಕ್ಕ ತಂಗಿಯರು. ಕಮಲ್ ಹಾಸನ್ ನೀವು ನಟ, ರಾಜಕಾರಣಿ. ಆದ್ರೆ ಭಾಷಾ ತಜ್ಞ ಅಲ್ಲ. ಹಾಗಾಗಿ ಕನ್ನಡದ ಬಗ್ಗೆ ತಿಳಿದು ಮಾತನಾಡಿ ಎಂದು ಟಾಂಗ್ ಕೊಟ್ಟರು.





