ಮೈಸೂರು: ಗೃಹಲಕ್ಷ್ಮೀ ಹಣ ಕೊಡಲಿಲ್ಲ ಅಂದ್ರೆ ಆಕಾಶ ಕಳಚಿ ಬೀಳಲ್ಲ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಇಲ್ಲ ಅಂದ್ರು ಆಕಾಶ ಕಳಚಿ ಬೀಳಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್ ಕೊಟ್ಟರು. 2 ವರ್ಷಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಸಾಕಾಯ್ತ? ಎಂದು ಪ್ರಶ್ನಿಸಿದ ಅವರು, ಎಲ್ಲರೂ ಸ್ವಲ್ಪ ದಿನ ಕಾಯಿರಿ, ಏನೆಲ್ಲಾ ಆಗುತ್ತೆ ಗೊತ್ತಾಗುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಸಚಿವ ಜಮೀರ್ ಅಹಮ್ಮದ್ ಇಲಾಖೆಯಲ್ಲಿ ಗೋಲ್‌ಮಾಲ್ ನಡೆಯುತ್ತಿರುವ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ತನಿಖೆ ನಡೆಯಬೇಕು. ಹಗರಣಗಳನ್ನು ನಮಗೆ ಸಿಗುವ ಅವಾರ್ಡ್ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಹಗರಣಗಳೇ ಅವಾರ್ಡ್ ಅಂದುಕೊಂಡು ಹಗರಣಗಳ ಸರಮಾಲೆ ನಡೆಯುತ್ತಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ಇದೆಲ್ಲ ಕಾಂಗ್ರೆಸ್‌ಗೆ ಸಿಕ್ಕ ಪ್ರಶಸ್ತಿನಾ? ಎಂದು ಪ್ರಶ್ನಿಸಿದರು.





