ಮೈಸೂರು: ಕಾಂಗ್ರೆಸ್‌ನವರು ಒಂದು ರೆಡಿಮೇಡ್ ಉತ್ತರ ರೆಡಿಮಾಡಿಕೊಂಡಿದ್ದು, ಎಲ್ಲಾ ಗಲಭೆಗೂ ಆರ್‌ಎಸ್‌ಎಸ್ ಕಾರಣ ಎನ್ನುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಗಲಭೆ ಮೂಲ ಯಾವುದು ಎಂದು ಪತ್ತೆ ಹಚ್ಚುವ ಕೆಲಸ ಮಾಡಿಲ್ಲ. ಸುಹಾಸ್ ಶೆಟ್ಟಿ, ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು ಹತ್ಯೆಗೆ ಆರ್‌ಎಸ್‌ಎಸ್ ಕಾರಣನಾ ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ನಾಯಕರು ಒಂದು ರೆಡಿಮೇಡ್ ಉತ್ತರ ರೆಡಿ ಇಟ್ಟುಕೊಂಡಿದ್ದಾರೆ. ಎಲ್ಲಾ ಘಟನೆಗೂ ಆರ್‌ಎಸ್‌ಎಸ್ ಕಾರಣ ಎಂದು ಹೇಳುತ್ತಿದ್ದಾರೆ. ಅವರೆಲ್ಲರೂ ಇದನ್ನು ದಕ್ಷಿಣದ ಕಾಶ್ಮೀರದ ರೀತಿ ನೋಡುತ್ತಿದ್ದಾರೆ. ಅದಕ್ಕಾಗಿ ಇಲ್ಲಿ ಹಿಂದೂಗಳನ್ನು ಅದೇ ರೀತಿ ನೋಡುತ್ತಿದ್ದಾರೆ. ಇವರನ್ನು ತಡೆಯೋದು ಆರ್.ಎಸ್.ಎಸ್ ಹಾಗೂ ವಿಹೆಚ್‌ಪಿ. ಹಾಗಾಗಿ ಎಲ್ಲದಕ್ಕೂ ಆರ್.ಎಸ್.ಎಸ್ ಕಾರಣ ಅಂತಾರೆ. ಬಿನ್ ಲಾಡೆನ್ ಹುಟ್ಟು ಹಾಕಿದ್ದು ಯಾರು? ಎಂದು ಪ್ರಶ್ನಿಸಿದ ಅವರು, ಸತ್ಯ ಗೊತ್ತಿದ್ರೂ ವೋಟ್ ಬ್ಯಾಂಕ್ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ವಸ್ತು ನಿಷ್ಠೆಯಿಂದ ನೋಡಿದ್ರೆ ಸತ್ಯ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ನಾಯಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:- ದೇಶದಲ್ಲಿ ಕಾಂಗ್ರೆಸ್ ಇಲ್ಲ ಅಂದ್ರೂ ಆಕಾಶ ಕಳಚಿ ಬೀಳಲ್ಲ: ಸತೀಶ್ ಜಾರಕಿಹೊಳಿಗೆ ಸಿ.ಟಿ.ರವಿ ಟಾಂಗ್
ಇನ್ನು ಹೇಮಾವತಿ ನೀರಿಗಾಗಿ ತುಮಕೂರಿನಲ್ಲಿ ಹೋರಾಟ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೀರಾವರಿ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ಮೊಕದ್ದಮೆ ಹಾಕಿರೋದು ತಪ್ಪು. ಈ ಮೂಲಕ ರಾಜ್ಯ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ. ಇದು ಸರಿಯಾದ ನಿರ್ಧಾರವಲ್ಲ ಈ ಕೂಡಲೇ ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.





