ಮೈಸೂರು: ಕೋವಿಡ್ ಸಮಯದಲ್ಲಿ ನಡೆದಿದೆ ಎನ್ನಲಾದ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ
ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಯಾರದರೂ ತಪ್ಪು ಮಾಡಿದರೆ ಶಿಕ್ಷೆ ಕೊಡಲಿ ಎಂದು ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು 16 ತಿಂಗಳಾಗಿದೆ. ಈಗ ಪ್ರಕರಣ ಸಂಬಂಧ ಮಧ್ಯಂತರ ವರದಿ ತರಿಸಿಕೊಂಡಿದ್ದಾರೆ. ಅಂತಿಮ ವರದಿ ಯಾವಾಗ ಬರುತ್ತೆ ನನಗೆ ಗೊತ್ತಿಲ್ಲ ಎಂದರು.
ಇನ್ನು ಸರ್ಕಾರಗಳು ಸೈಕಲ್ ಇದ್ದ ಹಾಗೆ, ಚಕ್ರ ತಿರುಗುವ ರೀತಿ ತಿರುಗುತ್ತೆ. ನಾವು ಒಂದೇ ಒಂದು ಪ್ರಕರಣವನ್ನೂ ಈ ರೀತಿ ಮಾಡಿಲ್ಲ. ಒಂದು ದ್ವೇಷದ ರಾಜಕಾರಣವನ್ನೂ ಸಹ ಮಾಡಿಲ್ಲ. ಖುರ್ಚಿ ಇರುವವರೆಗೂ ಮಾಡುತ್ತಾರೆ ಮಾಡಲಿ ಎಂದು ಕಿಡಿಕಾರಿದರು.
ಇನ್ನು ದ್ವೇಷದ ರಾಜಕಾರಣವನ್ನು ಕಲಿಸಿಕೊಡುತ್ತಿರುವುದು ಕಾಂಗ್ರೆಸ್, ನಾವು ಕೂಡ ದ್ವೇಷದ ರಾಜಕಾರಣ ಕಲಿಯಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ನೀಡಿದರು.