ಮೈಸೂರು: ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ಆಡಳಿತರೂಢ ಕಾಂಗ್ರೆಸ್ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದಪಡಿಸಿದೆ.
ಈ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷಗಳ ಬ್ರಷ್ಟಚಾರದ ದಾಖಲೆಗಳನ್ನು ಜನರ ಮುಂದಿಡಲಿದೆ. ಸಮಾವೇಶದಲ್ಲಿ ಸಾವಿರಾರ ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಮೈಸೂರಿನಾದ್ಯಾಂತ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಲಾಗಿದೆ.
ನಗರದಲ್ಲಿ ನಾಲ್ಕು ಡಿಐಜಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ, 36 ಡಿವೈಎಸ್ಪಿ, 77 ಇನ್ಸ್‌ಪೆಕ್ಟರ್, 175 ಪಿಎಸ್‌ಐ ಸೇರಿದಂತೆ ಜಿಲ್ಲೆಯ 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಹೊರ ಜಿಲ್ಲೆಯ 1500 ಪೊಲೀಸರು, 60 ಕೆಎಸ್‌ಆರ್‌ಪಿ ತುಕಡಿ, 20 ಸಿಎಆರ್ ತುಕಡಿ, 500 ಹೋಮ್ ಗಾರ್ಡ್ಸ್ ನಿಯೋಜನೆಯ ಅಲ್ಲದೇ, ಸಮಾವೇಶದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.
ಈ ಬೃಹತ್ ಜನಾಂದೋಲನ ಸಮಾವೇಶದ ಅಂಗವಾಗಿ ನಗರದಾದ್ಯಂತ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರ, ಶಾಸಕರು ಕಟೌಟ್ ಹಾಗೂ ಫ್ಲೆಕ್ಸ್‌ಗಳಉ ಎಲ್ಲೆಡೆ ರಾರಾಜಿಸುತ್ತಿವೆ.