Mysore
27
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಜನವರಿ 28 ಮತ್ತು 29ರಂದು ‘ತಟ್ಟೆ ಇಡ್ಲಿ ರಾದ್ಧಾಂತ’ ಹಾಸ್ಯ ನಾಟಕ ಪ್ರದರ್ಶನ

ಮೈಸೂರು: ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ: 28.01.2026 ಮತ್ತು 29.01.2026ರ ಸಂಜೆ 7ಕ್ಕೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ‘ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕ ಪ್ರದರ್ಶಿಸಲಿದೆ.

ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಮಧು ನೀನಾಸಂ ಬೆಳಕಿನ ವಿನ್ಯಾಸ, ಹೆಚ್.ಕೆ. ದ್ವಾರಕಾನಾಥ್ ರಂಗವಿನ್ಯಾಸ, ಉದಿತ್ ಹರಿತಸ್ ಹಿನ್ನೆಲೆ ಸಂಗೀತವಿದೆ.

ನಾಟಕಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತಮ್ಮ ಪತ್ರಿಕೆಗಳ ಈ-ಮೇಲ್ ವಿಳಾಸಕ್ಕೆ ರವಾನಿಸಿರುತ್ತೇವೆ. ಪ್ರವೇಶ ದರ ರೂ.100/-ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ 9964656482 ಸಂಪರ್ಕಿಸಬಹುದಾಗಿದೆ.

Tags:
error: Content is protected !!