ಮೈಸೂರು: ವಿಪಕ್ಷಗಳ ಪಾದಯಾತ್ರೆ ಬೆನ್ನಲ್ಲೇ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಟಿ.ಕೆ ಲೇಔಟ್ ನ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಶಾಸಕರ ಜೊತೆ ಶನಿವಾರ(ಆ.3) ಧಿಢೀರ್ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮೈಸೂರು, ಮಡಿಕೇರಿ ಹಾಗೂ ಚಾಮರಾಜನಗರದ ಸಚಿವರು, ಶಾಸಕರು ಹಾಗೂ ಮುಖಂಡರು ಭಾಗಿಯಾಗಿದ್ದರು.

ಸಿಎಂ ಸಿದ್ದರಾಮಯ್ಯ ಲಘು ಉಪಾಹಾರದ ಬಳಿಕ ಸಭೆ ನಡೆಸಿದ್ದು, ಸಿಎಂಗೆ ಶೋಕಾಸ್ ನೋಟಿಸ್, ಬಿಜೆಪಿ ಪಾದಯಾತ್ರೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿರುವ ಸಾಧ್ಯತೆಯಿದೆ.






