Mysore
22
mist

Social Media

ಬುಧವಾರ, 10 ಡಿಸೆಂಬರ್ 2025
Light
Dark

ಚಿಣ್ಣರ ಪ್ರತಿಭೆಗೆ ರಂಗಭೂಮಿ ಸಹಕಾರಿ ; ಹೆಚ್.ಜನಾರ್ಧನ್‌

childrens summer camp mysuru

ಮೈಸೂರ : ರಂಗಭೂಮಿ ಮತ್ತು ನಾಟಕಗಳು ಮಕ್ಕಳನ್ನು ಉತ್ತಮ ಮನುಷ್ಯರಾಗಿ ಮಾಡುವ ಕಲಾ ಕೇಂದ್ರಗಳಾಗಿವೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಹಾಗೂ ಖ್ಯಾತ ಜನಪದ ಗಾಯಕ ಹೆಚ್. ಜನಾರ್ಧನ್ ಹೇಳಿದರು.

ನಗರದ ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕದಲ್ಲಿ ಮಕ್ಕಳ ಲೋಕ-೨೦೨೫ ಧ್ವನ್ಯಾಲೋಕ, ಜನಮನ ಸಾಂಸ್ಕ ತಿಕ ಸಂಘಟನೆ, ಸಮತಾ ವೇದಿಕೆ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಉಧ್ಘಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ದೇಶದ ಆಸ್ತಿ. ಹೀಗಾಗಿ ಮಕ್ಕಳಿಗೆ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯುದಕ್ಕೆ ಬೀಡಬೇಕು. ಅಂತಹ ಆಸಕ್ತಿಯನ್ನು ಹೊರತರುವಲ್ಲಿ ರಂಗಭೂಮಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ಮಕ್ಕಳು ಪ್ರಸುತ್ತ ದಿನಗಳಲ್ಲಿ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಏಕಾಗ್ರತೆಯನ್ನು ಸಹ ಕಳೆದುಕೊಳ್ಳತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಶಿಬಿರಗಳಲ್ಲಿ ತೋಡಗಿಸಿ ಕೊಳ್ಳವುದರಿಂದ ಉತ್ತಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳತ್ತಾರೆ. ಇಲ್ಲಿ ೨೦ ದಿನ ನಡೆಯುವ ಬೇಸಿಗೆ ಶಿಬಿರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೋಡಗಿಕೊಳ್ಳುವುದರಿಂದ ಉತ್ತಮ ಮೌಲ್ಯಗಳನ್ನು ಕಲಿಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ವಿಜ್ಞಾನಿ ಡಾ.ರತಿರಾವ್, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧ್ವನ್ಯಾಲೋಕದ ಮುಖ್ಯಸ್ಥೆ ಪ್ರೊ.ಜಯಶ್ರೀ ಸಂಜಯ್, ರಂಗಕರ್ಮಿಗಳಾದ ಕೆ.ಆರ್.ಸುಮತಿ, ಸುಪ್ರೀತ್ ಭಾರದ್ವಾಜ್, ರೂಬಿನ್ ಸಂಜಯ್, ವಿದುಷಿ ಹರಿಣಾಕ್ಷಿ ಸೇರಿದಂತೆ ಚಿಣ್ಣರು ಉಪಸ್ಥಿತರಿದ್ದರು.

Tags:
error: Content is protected !!