ಮೈಸೂರು: ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್ ವತಿಯಿಂದ ಚಾಮುಂಡಿಬೆಟ್ಟದ ಪಾದಗಳನ್ನು ಸ್ವಚ್ಛತೆ ಮಾಡಲಾಯಿತು.
ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದ ಪಾದದ ಬಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಮಾತ ಅಮೃತಾನಂದಮಯಿ ಮಠದ ಪ್ರಸಾದ ಅಮೃತ ಚೈತನ್ಯ ಸ್ವಾಮೀಜಿ, ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಶ್ಯಾಮಭಟ್ಟರು, ಟ್ರಸ್ಟಿನ ಕಾನೂನು ಸಲಹೆಗಾರ ಕಾಂಕ್ರೀಟ್ ರಾಜಣ್ಣ ಸೇರಿದಂತೆ ಟ್ರಸ್ಟ್‌ನ ಗೌರವಾಧ್ಯಕ್ಷರುಗಳು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕುಮರೇಶ್, ಚಂದ್ರಶೇಖರ್, ಚಾಮ, ಧರ್ಮರಾಜ್, ಸಿ.ಪಿ.ಸುರೇಶ್, ವಿನೋದ್ ಕುಮಾರ್, ಸತೀಶ್ ಸೇರಿದಂತೆ ಹಲವು ಸ್ವಯಂಸೇವಕರು, ಯಾತ್ರಾರ್ಥಿಗಳು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಚಾಮುಂಡಿಬೆಟ್ಟದ ಎಲ್ಲಾ ಮೆಟ್ಟಿಲುಗಳನ್ನು ಸ್ವಚ್ಛತೆ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಯಿತು.





