ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ನಿನ್ನೆ ಜೇನುಗೂಡು ಸೇವಾ ಸಮಿತಿ ವತಿಯಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಮೈಸೂರಿನ ವಿಜಯನಗರದ 4ನೇ ಹಂತದಲ್ಲಿ ಆಯೋಜಿಸಿದ್ದ 16ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡ ಎಸ್.ಬಿ.ಮಂಜು, ಕಾಂಗ್ರೆಸ್ ಹಿರಿಯ ಮಹಿಳಾ ಮುಖಂಡೆ ಮಾಲ ಮಹೇಂದ್ರ, ಜೇನುಗೂಡು ಸೇವಾ ಸಮಿತಿಯ ಸಂಸ್ಥಾಪಕಿ ರಾಧಾ ಸಂದೀಲ್ ಅವರು ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಅಲ್ಲಿ ನೆರೆದಿದ್ದ ನೂರಾರು ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ಅಲ್ಲಿಗೆ ಬಂದಿದ್ದ ಸಾರ್ವಜನಿಕರು ಚಾಮುಂಡೇಶ್ವರಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಭವ್ಯ ಮುತ್ತುರಾಜ್, ನತೀಶ್ ಗೌಡ, ನವೀಶ್ ಗೌಡ, ಹೃತ್ವಿಕ್ ಗೌಡ, ಯಾತ್ರೇಶ್ ಗೌಡ, ರತನ್ ಗೌಡ, ನಾಗೇಶ್ ಗೌಡ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.