ಮೈಸೂರು : ಪಾಕಿಸ್ತಾನದೊಂದಿಗೆ ಕದನ ವಿರಾಮ ಘೋಷಣೆ ವಿಚಾರಕ್ಕೆ ಸಂಬಂದಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಡೆಯು ಅನುಮಾನಕ್ಕೀಡಾಗಿದ್ದು, ದೇಶದ ಜನರಿಗೆ ಸತ್ಯಾಂಶವನ್ನು ಹೇಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಪ್ರದೇಶ ವಶಪಡಿಸಿಕೊಳ್ಳಲು ಭಾರತಕ್ಕೆ ಒಂದು ಒಳ್ಳೆಯ ಅವಕಾಶ ಇತ್ತು. ಆದರೆ, ಪ್ರಧಾನ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು ಕೇಳಿ ಕೈಚೆಲ್ಲಿ ಕೂತರು. ಇದು ಕೇವಲ ಇಬ್ಬರಿಗೋಸ್ಕರ ಕದನ ವಿರಾಮ ಘೋಷಣೆ ಮಾಡಿರೋದು. ಅವರು ಯಾರು ಅಂದರೆ ಅದಾನಿ, ಅಂಬಾನಿ. ಇವರಿಬ್ಬರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎನ್ನುವ ಉದ್ದೇಶಕ್ಕಾಗಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟೀಕಿಸಿದರು.
ಇಡೀ ದೇಶದ ಜನರು ಭಾರತದ ಸೈನ್ಯಕ್ಕೆ ಕೈಜೋಡಿಸಿತ್ತು. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದರು. ಪಾಕಿಸ್ತಾನವನ್ನು ಸುಲಭವಾಗಿ ಉಡಾಯಿಸಬಹುದಿತ್ತು. ಇದನ್ನು ಕೈ ಚೆಲ್ಲಿ ಭಾರತೀಯ ಸೈನಿಕರಿಗೆ ಅಪಮಾನ ಮಾಡುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ ಎಂದರು.
ಇದೆಲ್ಲಾ ಹೊಂದಾಣಕೆ ರಾಜಕೀಯ. ಈಗ ತಾನಾಗಿಯೇ ಇಂದಿರಾ ಗಾಂಧಿ ನೆನಪಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಬಿಜೆಪಿ ಇಲ್ಲ ಅಂದರೆ ಬಿಜೆಪಿ ಇಲ್ಲ. ಹಿಂದೂ ಮುಸ್ಲಿಂರು ಎಂದು ಕೋಮು ಭಾವನೆ ತಂದು ಪಕ್ಷ ಅಧಿಕಾರಕ್ಕೆ ಬರೋದು ಒಂದೇ ಒಂದು ಉದ್ದೇಶ. ಇದನ್ನೇಲ್ಲ ಮಾತನಾಡಿದರೆ ನಾವು ದೇಶ ದ್ರೋಹಿಗಳು. ಮೊದಲು ನಿಮ್ಮ ವಿಶ್ವಗುರುವನ್ನು ದೇಶ ದ್ರೋಹಿ ಎಂದು ಜೈಲಿಗೆ ಹಾಕಬೇಕು ಎಂದು ಕಿಡಿಕಾರಿದರು.





