Mysore
21
overcast clouds
Light
Dark

ಸಿಎಂ ಮೇಲಿನ ದ್ವೇಷವನ್ನು ಯತೀಂದ್ರ ಮೇಲೆ ತೀರಿಸಿಕೊಳ್ಳಬಾರದು: ಹಳ್ಳಿಹಕ್ಕಿಗೆ ಭೈರತಿ ಸುರೇಶ್‌ ಟಾಂಗ್‌!

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಅವರ ವರ್ಗಾವಣೆಗೊಳಿಸಿ ಸಚಿವ ಭೈರತಿ ಸುರೇಶ್‌ ಸೋಮವಾರ ಉನ್ನತಮಟ್ಟದ ಸಭೆ ನಡೆಸಿದ ಬಳಿಕ ಹೇಳಿದರು.

ಜನತೆಗೆ ಈ ಪ್ರಕರಣದ ತನಿಖೆಗೆ ಇಬ್ಬರು ಐಎಎಸ್‌ ಅಧಿಕಾರಿಗಳಾದ ವೆಂಕಟಾಚಲಪತಿ, ಅವಳಗಿ ಹಾಗೂ ನಾಲ್ಕು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ್ತು ಈ ಪ್ರಕರಣ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಇದರ ನಡುವೆ ಎಂಎಲ್‌ಸಿ ವಿಶ್ವನಾಥ್‌ ಮುಡಾ ಅಕ್ರಮ ಕುರಿತು ಪೆನ್‌ಡ್ರೈವ್‌ನಲ್ಲಿ ಮಾಹಿತಿ ಕೇಳಿದ್ದು, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಭೈರತಿ ಸುರೇಶ್‌, ಮುಡಾ ವಿರುದ್ಧ ಹಲವಾರು ಆರೋಪಗಳನ್ನು ಎಚ್‌. ವಿಶ್ವನಾಥ್‌ ಅವರು ಮಾಡುತ್ತಾ ಬರುತ್ತಿದ್ದಾರೆ. ಮತ್ತೊಂದೆಡೆ ಅವರ ಹೆಸರನ್ನು ಹೇಳದೇ ಸೈಟಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದರು.

ಮುಡಾ ವ್ಯವಹಾರಗಳಲ್ಲಿ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಮೇಲಿನ ದ್ವೇಷವನ್ನು ಅವರ ಮಗನಿಗೆ ಕಳಂಕ ತರುವ ರೀತಿಯಲ್ಲಿ ತೀರಿಸಿಕೊಳ್ಳಬಾರದು. ವಿಶ್ವನಾಥ್‌ ಅವರಿಗೆ ಎಲ್ಲರನ್ನು ನಿಂದಿಸುವ ಚಟವಿದೆ. ದೇವೇಗೌಡ, ಕುಮಾರಸ್ವಾಮಿ ಅವರನ್ನೇ ಅವರು ಬಿಟ್ಟಿಲ್ಲ ಎಂದು ಹರಿಹಾಯ್ದರು.