Mysore
20
clear sky

Social Media

ಗುರುವಾರ, 29 ಜನವರಿ 2026
Light
Dark

ಕಲ್ಯಾಣ ರಾಜ್ಯ ನಿರ್ಮಿಸುವ ಬಜೆಟ್‌: ಹೆಚ್‌.ಎ. ವೆಂಕಟೇಶ್‌

ಮೈಸೂರು: ಗ್ಯಾರಂಟಿ ಯೋಜನೆಗಳ ನೆರವು ಮತ್ತು ಆಧಾರದೊಂದಿಗೆ ಸಮಾಜದ ಎಲ್ಲಾ ಸಮುದಾಯಗಳ ಸರ್ವಾಂಗಿಣ ಅಭಿವೃದ್ದಿಗಾಗಿ ಕಲ್ಯಾಣ ರಾಜ್ಯ ಕಟ್ಟುವ ಮುಖ್ಯಮಂತ್ರಿಯವರ ಕನಸು ಈ ಬಜೆಟ್‌ ಮೂಲಕ ನನಸಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್‌.ಎ.ವೆಂಕಟೇಶ್‌ ಹೇಳಿದ್ದಾರೆ.

ರಾಜ್ಯ ಬಜೆಟ್‌ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಂಡ ಜನತೆಯ ನೋವು, ಅಸಮಾನತೆ ನಿವಾರಿಸಲು ತಮ್ಮ 16ನೇ ಬಜೆಟ್‌ನಲ್ಲಿ ಶ್ರಮ ಹಾಕಿರುವುದು ಎದ್ದು ಕಾಣುತ್ತಿದೆ. ಈ ಬಜೆಟ್‌ ಗಾತ್ರದಲ್ಲಿಯೂ, ಗುರಿಯಲ್ಲಿಯೂ ದೊಡ್ಡದಾಗಿದೆ. ಒಬ್ಬ ಯಶಸ್ವಿ ಆಡಳಿತಗಾರನ ದೂರದೃಷ್ಠಿ ಅಭಿವೃದ್ದಿಗೆ ಅನುಗುಣವಾಗಿ ಈ ಬಜೆಟ್‌ ಇದೆ ಎಂದು ತಿಳಿಸಿದರು.

ಈ ಬಜೆಟ್‌ ಕುರಿತು ವಿಪಕ್ಷಗಳ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ಒಳ್ಳೆಯ ಯೋಜನೆಗಳು, ಅಂಶಗಳನ್ನು ಶ್ಲಾಘಿಸಬೇಕು ಎನ್ನುವ ಕನಿಷ್ಠ ಮಾನವೀಯ ಪ್ರಜ್ಞೆ ಇಲ್ಲದಂತೆ ಇವರ ಹೇಳಿಕೆಗಳು ಹಾಸ್ಯಸ್ಪದ. ಆದರೆ, ಜನತೆ ಈ ಬಜೆಟ್‌ ಅನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ತಾರತಮ್ಯದ ನಡುವೆಯೂ ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದ ಅಭಿವೃದ್ದಿಯ ವೇಗವು ಹೆಚ್ಚಿದೆ ಎನ್ನುವುದನ್ನು ಸಿಎಂ ಈ ಬಜೆಟ್‌ ಮೂಲಕ ಸಾಬೀತು ಮಾಡಿದ್ದಾರೆ.

ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ದಿ, ಎಸ್‌ಸಿ/ಎಸ್‌ಟಿ ಅಭಿವೃದ್ದಿ, ಅಲ್ಪ ಸಂಖ್ಯಾತರ ಅಭಿವೃದ್ದಿ, ನೀರಾವಿ ಅಭಿವೃದ್ದಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಅತ್ಯುತ್ತಮ ಎನಿಸುವ ಯೋಜನೆಗಳನ್ನು ಈ ಬಜೆಟ್‌ನಲ್ಲಿ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೆಚ್‌.ಎ.ವೆಂಕಟೇಶ್‌ ತಿಳಿಸಿದ್ದಾರೆ.

 

Tags:
error: Content is protected !!