Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಮೇ 17 ರಂದು ಬೃಹತ್‌ ರಕ್ತದಾನ ಶಿಬಿರ : ಶಾಸಕ ತನ್ವೀರ್‌ ಸೇಠ್‌

ಮೈಸೂರು : `ದೇಶದ ಸೈನಿಕರೊಂದಿಗೆ ದೇಶವಾಸಿಗಳು’ ಎಂಬ ದ್ಯೇಯವಾಕ್ಯದೊಂದಿಗೆ ಅಜೀಜ್‌ ಸೇಠ್‌ ಜೋಡಿ ರಸ್ತೆಯಲ್ಲಿರುವ ಕೇಂದ್ರ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಮೇ 17 ರಂದು ಬೃಹತ್ ರಕ್ತ ದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜನ್ಮ ಕೊಟ್ಟ ತಾಯಿಯನ್ನು ಮರಿಬೇಡ, ಬಾಳು ಕೊಟ್ಟ ತಂದೆಯನ್ನು ಮರಿಬೇಡ, ಅನ್ನ ಕೊಟ್ಟ ರೈತನನ್ನು ಮರಿಬೇಡ, ಹಾಗೆಯೇ ನಿನ್ನನ್ನು ಸದಾ ಕಾಲ ರಕ್ಷಿಸೋ ಆ ಸೈನಿಕರನ್ನು ಎಂದು ಮರಿಯಬಾರದು ಎನ್ನುವ ನಿಟ್ಟಿನಲ್ಲಿ ಸೈನಿಕರ ತ್ಯಾಗದ ಸ್ಮರಣೆಗಾಗಿ ಈ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಸ್ಥಳಿಯ ನಿವಾಸಿಗಳು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಜೀವಧಾರ ಬ್ಲಡ್ ಬ್ಯಾಂಕ್ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸುತ್ತಿರುವ ಈ ಶಿಬಿರಕ್ಕೆ ಪೌರಕಾರ್ಮಿಕರು, ಗುತ್ತಿಗೆದಾರರು, ಜೈಭೀಮ್ ಹಾಗೂ ಅಂಬೇಡ್ಕರ್ ಸಂಘಟನೆಗಳು ಸೇರಿ ಎಲ್ಲಾ ಸಂಘಟನೆಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಪಕ್ಷಾತೀತವಾಗಿ ದೇಶ ಕಾಯುವ ಯೋಧರಿಗಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಾವಿರದಿಂದ ಒಂದೂವರೆ ಸಾವಿರ ಯೂನಿಟ್ ರಕ್ತ ಸಂಗ್ರಹಣೆಯ ಗುರಿ ಹೊಂದಿದ್ದೇವೆ ಎಂದರು.

ಇನ್ನೂ ಕೇಂದ್ರದ ಮಾರ್ಗಸೂಚಿಯಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶೇ.75ರಷ್ಟು ರಕ್ತ ನೀಡಿ ಉಳಿದ ರಕ್ತವನ್ನು ಯೋಧರ ಅವಶ್ಯಕತೆಗೆ ಕಳುಹಿಸಿಕೊಡುವ ಸಂಬಂಧ ಈಗಾಗಲೇ ಸಂಬಂಧಪಟ್ಟವರೊಟ್ಟಿಗೆ ಚರ್ಚಿಸಲಾಗಿದೆ. ದೇಶದಲ್ಲಿ ಯುದ್ಧದ ವಾತಾವರಣ ಇರುವ ಈ ವೇಳೆಯಲ್ಲಿ ರಕ್ತದ ಅವಶ್ಯಕತೆ ಯೋಧರಿಗೆ ಇರುತ್ತದೆ. ಹೀಗಾಗಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಬೃಹತ್ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಾರ್ವಜನಿಕರು ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಬೇಕೆಂದು ಕೋರಿದರು.

ಇನ್ನೂ ರಕ್ಷಣಾ ವಿಷಯದಲ್ಲಿ ಕ್ರೇಡಿಟ್ ವಿಚಾರಗಳ ಚರ್ಚೆ ಅಪ್ರಸ್ತುತವಾಗಿದೆ. ಈ ವಿಚಾರದಲ್ಲಿ ಮಾದ್ಯಮಗಳು ಸಹ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಭದ್ರತೆಗೆ ಕೇಂದ್ರ ಸರ್ಕಾರದ ಜತೆಗೆ ನಿಲ್ಲಬೇಕಿದೆ. ಈಗಾಗಲೇ ನಮ್ಮ ಪಕ್ಷ ಹಾಗೂ ಸರ್ಕಾರ ಕೇಂದ್ರದ ಜೊತೆ ನಿಂತಿದ್ದು ನಾವು ಸಹ ಅದೇ ನಿಲುವಿನಲ್ಲಿ ಇದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Tags:
error: Content is protected !!