ಮೈಸೂರು: ಪತ್ನಿ ಕೊಲೆ ಆರೋಪದಡಿ ಪತಿ ಜೈಲುವಾಸ ಅನುಭವಿದ್ದು, ಐದು ವರ್ಷಗಳ ಬಳಿಕ ಲವರ್ ಜೊತೆ ಪತ್ನಿ ಪತ್ತೆಯಾದ ಕೇಸ್ ವಿಚಾರ ಮತ್ತೆ ಕೋರ್ಟ್ ಮೊರೆ ಹೋಗಿದ್ದು, ಬೆಟ್ಟದಪುರ ಪೊಲೀಸರು ನ್ಯಾಯಾಲಯವನ್ನು ಮಿಸ್ ಗೈಡ್ ಮಾಡಿದ್ದಾರೆ ಎಂದು ವಕೀಲ ಪಾಂಡು ಪೂಜಾರಿ ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಪಾಂಡು ಪೂಜಾರಿ, ಬೆಟ್ಟದಪುರ ಪೊಲೀಸರು ಬೇರೆ ಮಹಿಳೆ ಸ್ಕೆಲಿಟನ್ ಅನ್ನು ಮಲ್ಲಿಗೆ ಎಂದು ಜಾರ್ಜ್‌ಶೀಟ್ ಫೈಲ್ ಮಾಡಿದ್ದಾರೆ. ಸರಿಯಾಗಿ ವಿಚಾರಣೆ ನಡೆಸದೇ, ಕೇವಲ ಊಹಾಪೋಹವಾಗಿ ತನಿಖೆ ಮಾಡಿದ್ದಾರೆ. ನನ್ನ ಕಕ್ಷಿದಾರ ಮಾಡದ ತಪ್ಪಿಗೆ ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಆದ್ದರಿಂದ ನನ್ನ ಕಕ್ಷಿದಾರನಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಮುಂದುವರೆದು ಮಾತನಾಡಿದ ವಕೀಲರು, ಸಿಕ್ಕ ಮೃತ ದೇಹ ಯಾರದ್ದು? ಅವರದ್ದೂ ಕೊಲೆಯೋ ಅಥವಾ ಆತ್ಮಹತ್ಯೆಯೋ ಈ ಬಗ್ಗೆ ಎಲ್ಲಾ ತನಿಖೆ ಮಾಡಿ ಇದೇ ತಿಂಗಳ 17ನೇ ತಾರೀಖಿನೊಳಗೆ ವರದಿ ಕೊಡಿ ಎಂದು ಎಸ್ಪಿ ವಿಷ್ಣುವರ್ಧನ್‌ರಿಗೆ ಕೋರ್ಟ್ ಸೂಚನೆ ಕೊಟ್ಟಿದೆ ಎಂದರು.





