ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದರ್ಶನಕ್ಕೆ ಬರುವವರಿಗೆ ವಿಶೇಷ ಮೈಸೂರು ಪಾಕ್ ಸಿದ್ದವಾಗುತ್ತಿದೆ.
ಕಳೆದ 19 ವರ್ಷದಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಚಾಮುಂಡೇಶ್ವರಿ ಸೇವಾ ಸಮಿತಿ ಈ ಬಾರಿಯೂ ಪ್ರಸಾದ ವಿತರಣೆ ಮಾಡುತ್ತಿದೆ. ಅದಕ್ಕೆಂದೆ ದರ್ಶನಕ್ಕೆ ಬರುವವರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್‌ತಯಾರಿಸಲಾಗಿತ್ತಿದೆ.
ನಗರದ ನಿತ್ಯಾನಂದ ಕಲ್ಯಾಣ ಮಂಟಪದಲಿ 40 ಬಾಣಸಿಗರ ತಂಡದಿಂದ ಮೈಸೂರು ಪಾಕ್ ತಯಾರಿಸಲಾಗುತ್ತಿದ್ದು, ಶುಕ್ರವಾರದ ವೇಳೆಗೆ ತಯಾರಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಪಾಕ್ ತಯಾರಿಕೆಗೆ 200 ಕೆ.ಜಿ ಕಡಳೆ ಹಿಟ್ಟು, 500 ಕೆ.ಜಿ ಸಕ್ಕರೆ, 30 ಕೆ.ಜಿ ಆಯಿಲ್, 100 ಕೆ.ಜಿ ತುಪ್ಪ 3 ಕೆ.ಜಿ ಏಲಕ್ಕಿ ಬಳಸಲಾಗಿದೆ.
ಆಷಾಡ ಮಾಸದ ಮೊದಲ ಶುಕ್ರವಾರದಂದು ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಅಂದು ಬೆಳಿಗ್ಗೆಯಿಂದಲೇ ಪ್ರಸಾದ ವಿತರಣೆ ಆರಂಭವಾಗಲಿದೆ.