Mysore
19
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ನಟ ಪುನೀತ್‌ ಹೆಸರು ಅಮರ: ಡಿ ಟಿ ಪ್ರಕಾಶ್

ಮೈಸೂರು: ನಟ ದಿವಂಗತ ʻಪುನೀತ್‌ ರಾಜ್‌ಕುಮಾರ್‌ʼ  ನಮ್ಮಿಂದ ಮರೆಯಾಗಿ 3 ವರ್ಷ ಕಳೆದಿವೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಜನರ ಮನಸ್ಸಿನಲ್ಲಿ ಇಂದಿಗೂ ಅಮರವಾಗಿದ್ದಾರೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹೇಳಿದರು.

ನಗರದ ಅಗ್ರಹಾರದ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನಟ ಪುನೀತ್ ರಾಜ್‌ಕುಮಾರ್‌ ಅವರ 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

ಇಡೀ ದೇಶವೇ ಪುನೀತ್‌ ಅವರನ್ನು ಇಂದಿಗೂ ಸ್ಮರಣೆ ಮಾಡುತ್ತದೆ. ಅವರ ಒಳ್ಳೆಯ ಕಾರ್ಯಗಳು ಎಲ್ಲರಿಗೂ ದಿಕ್ಸೂಚಿಯಾಗಿವೆ. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಶಂಕರ ಮಠದ ಧರ್ಮದರ್ಶಿ ರಾಮಚಂದ್ರ ರಾಯರು, ಎಂ.ಆರ್ ಬಾಲಕೃಷ್ಣ, ನಾಗಶ್ರೀ ಸುಚೀಂದ್ರ, ವಿದ್ಯಾ, ಗೋಪಾಲ್ ರಾವ್ ,ಪಣೀಶ್, ರಂಗನಾಥ್,  ನಾಗಭೂಷಣ್,  ಕೆ ಎಂ ನಿಶಾಂತ್, ಜ್ಯೋತಿ ಹಾಗೂ ಇನ್ನಿತರರು ಹಾಜರಿದ್ದರು.

Tags:
error: Content is protected !!