ನವದೆಹಲಿ : ನಮಗೆ ಈ ಯುದ್ಧ ಬೇಕಾಗಿಲ್ಲ, ನಾವು ಯುದ್ಧ ಆರಂಭಿಸಲಿಲ್ಲ, ಆದ್ರೆ ಹಮಾಸ್ ಆರಂಭಿಸಿರುವ ಯುದ್ಧವನ್ನು ನಾವು ಅಂತ್ಯಗೊಳಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಮತ್ತೊಂದು ವೀಡಿಯೋ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ನಮಗೆ ಈ ಯುದ್ಧ ಬೇಕಾಗಿಲ್ಲ, ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ಬಲವಂತದಿಂದ ಯುದ್ಧ ಹೇರಲಾಯಿತು. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ ಅದನ್ನು ಮುಗಿಸುತ್ತದೆ. ಈ ಯುದ್ಧವನ್ನು ಇಸ್ರೇಲ್ ಗೆಲ್ಲುತ್ತದೆ, ನಾವು ಗೆದ್ದಾಗ, ಇಡೀ ನಾಗರಿಕ ಜಗತ್ತು ಗೆಲ್ಲುತ್ತದೆ ಎಂದು ಅವರು ಗುಡುಗಿದ್ದಾರೆ.
ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ತುಂಬಾ ದೊಡ್ಡ ತಪ್ಪು ಮಾಡಿದ್ದಾರೆ ಒತ್ತಿ ಎಂದು ಒತ್ತಿಹೇಳುತ್ತಾ, ಒಮ್ಮೆ, ಯಹೂದಿ ಜನರು ರಾಷ್ಟ್ರಹೀನರಾಗಿದ್ದರು, ಒಮ್ಮೆ ಯಹೂದಿಗಳು ರಕ್ಷಣೆಯಿಲ್ಲದವರಾಗಿದ್ದರು, ಆದ್ರೆ ಇನ್ಮುಂದೆ ನಾವು ಬೆಲೆಯನ್ನು ನಿಗದಿಪಡಿಸುತ್ತೇವೆ. ಇಸ್ರೇಲ್‌ನ ಇತರ ಶತ್ರುಗಳು ಮುಂಬರುವ ದಶಕಗಳವರೆಗೆ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇಸ್ರೇಲಿ ಕುಟುಂಬಗಳನ್ನು ಅವರ ಮನೆಗಳಲ್ಲಿ ಹತ್ಯೆ ಮಾಡಿದೆ, ಹೊರಾಂಗಣ ಉತ್ಸವದಲ್ಲಿ ನೂರಾರು ಯುವಕರನ್ನು ಕಗ್ಗೊಲೆ ಮಾಡಲಾಗಿದೆ. ಹತ್ಯಾಕಾಂಡದಿಂದ ಬದುಕುಳಿದ ಹಲವಾರು ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನ ಅಪಹರಿಸಲಾಗಿದೆ. ಹಮಾಸ್ ಉಗ್ರರು ಮಕ್ಕಳನ್ನೂ ಬಂಧಿಸಿದ್ದಾರೆ, ಕೆಲವರನ್ನ ಸುಟ್ಟುಹಾಕಿದ್ದಾರೆ ಮತ್ತು ಗಲ್ಲಿಗೇರಿಸಿದ್ದಾರೆ ಎಂದು ವಿಷಾದಿಸಿದ್ದಾರೆ.