Mysore
24
overcast clouds

Social Media

ಗುರುವಾರ, 03 ಏಪ್ರಿಲ 2025
Light
Dark

ಏ.೮ ರಂದು ವರ್ಷದ ಮೊದಲ ಸೂರ್ಯಗ್ರಹಣ: ಭಾರತದಲ್ಲಿ ಗೋಚರಿಸಲ್ಲ ಗ್ರಹಣ?

ನವದೆಹಲಿ: ಈ ವರ್ಷದ (2024) ಮೊದಲ ಸೂರ್ಯಗ್ರಹಣ ಇದೇ ಏಪ್ರಿಲ್‌ ೮ ರಂದು ಸಂಭವಿಸಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಈ ಸೂರ್ಯಗ್ರಹಣ ಏ.೮ರ ಸೋಮವಾರದಂದು ಗೋಚರಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗುತ್ತಿಲ್ಲ. ಏಕೆಂದರೆ ಸೂರ್ಯಗ್ರಹಣ ಸಂಭವಿಸುವಾಗ ಭಾರತದಲ್ಲಿ ಮಧ್ಯರಾತ್ರಿಯಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ?

ಚಂದ್ರನ ನೆರಳು ಸೋಪೂರ್ಣೌಾಗಿ ಸೂರ್ಯನ ಮೇಲೈ ಮೇಲೆ ಬಿದ್ದಾಗ ಸಂಪೂರ್ಣ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುದೇ ಇದ್ದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನ ನೆರಳು ಭೂಮಿಯ ಮೇಲ್ಮೈಯಲ್ಲಿ ವೇಗವಾಗಿ ಚಲಿಸುವಾಗ ಸೂರ್ಯಗ್ರಹಣ ಗೋಚರವಾಗುತ್ತದೆ. ಇದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಸಂಭವಿಸುತ್ತದೆ.

ಎಲ್ಲೆಲ್ಲಿ ಗ್ರಹಣ ಗೋಚರ?

ಈ ಬಾರಿ ಸೂರ್ಯಗ್ರಹಣವು ಉತ್ತರ ಅಮೆರಿಕದಲ್ಲಿ ಕಾಣಿಸುತ್ತದೆ. ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ.

ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ. ಅಲ್ಲದೆ ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುತ್ತದೆ.

Tags: