Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಬ್ರಿಟನ್ ನ ಪ್ರಧಾನಿ ಕಛೇರಿಯಲ್ಲಿ ದೀಪಾವಳಿ ಆಚರಿಸಿ ಗಮನ ಸೆಳೆದ ರಿಷಿ ಸುನಕ್ ದಂಪತಿ

ಬ್ರಿಟನ್ : ಬ್ರಿಟನ್ ಪ್ರಧಾನಿ ಭಾರತದ ಅಳಿಯ ರಿಷಿ ಸುಲಕ್ ದಂಪತಿ ಬ್ರಿಟನ್ನಿನ ಅಧಿಕೃತ ಪ್ರಧಾನಿ ಕಚೇರಿಯಲ್ಲಿ ಭಾರತೀಯ ಸಂಪ್ರದಾಯದಂತೆ ದೀಪಗಳನ್ನು ಬೆಳಗಿಸಿ ವಿಶೇಷವಾಗಿ ಬೆಳಕಿನ ಹಬ್ಬವನ್ನು ಆಚರಿಸಿ ಗಮನ ಸೆಳೆದಿದ್ದಾರೆ.

ರಿಷಿ ಸುನಕ್ ಹಾಗೂ ಅವರ ಪತ್ನಿ, ಅಕ್ಷತಾ ಮೂರ್ತಿಯವರು ಸಾಂಪ್ರದಾಯಿಕ ಉಡುಗೆ ತೊಟ್ಟು ತಮ್ಮ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಸದ್ಯ ದೀಪಾವಳಿ ಹಬ್ಬವನ್ನು ಆಚರಿಸಿರುವ ಫೋಟೋ ಹಾಗೂ ವಿಡಿಯೋಗಳನ್ನು ರಿಶಿ ಸುನಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪತ್ನಿ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದ್ದಾರೆ.

 ಇನ್ನು ವಿದೇಶದಲ್ಲಿದ್ದರೂ ಕೂಡ ಈ ಸುಲಕ್ ದಂಪತಿ ಭಾರತೀಯ ಸಂಸ್ಕೃತಿಯ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದಾರೆ. ವಿದೇಶದಲ್ಲಿ ನಡೆಸಿದರು ಕೂಡ ಭಾರತೀಯ ಹಬ್ಬಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇವರ ಈ ನಡೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!