Mysore
25
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಏಷ್ಯಾದ ಕುಬೇರರ ನಗರವಾಗಿ ಹೊರಹೊಮ್ಮಿದ ಮುಂಬೈ: ಕಾರಣ ಗೊತ್ತಾ?

ಮುಂಬೈ: ಭಾರತದ ವಾಣಿಜ್ಯ ನಗರಿ ಮುಂಬೈಗೆ ಮತ್ತೊಂದು ಗರಿ ಸೇರಿದ್ದು, ಮುಂಬೈ ಈಗ ಏಷ್ಯಾದ ಕುಬೇರರ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿದ ಮೊದಲ ನಗರ ಎಂಬ ಕೀರ್ತಿ ಮುಂಬೈ ಪಾಲಾಗಿದೆ. ಈ ಹಿಂದೆ ಇದ್ದ ಬೀಜಿಂಗ್‌ ನಗರವನ್ನು ಹಿಂದಿಕ್ಕಿ ಮುಂಬೈ ಅಗ್ರಸ್ಥಾನಕ್ಕೇರಿದೆ.

ಬೀಜಿಂಗ್ ಮಹಾನಗರ 16 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಮುಂಬೈ ಕೇವಲ 603 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಚೀನಾದಲ್ಲಿ ಒಟ್ಟು 814 ಮಂದಿ ಶತಕೋಟ್ಯಧಿಪತಿಗಳಿದ್ದರೆ, ಭಾರತದಲ್ಲಿ ಈ ಸಂಖ್ಯೆ 271. ಆದರೆ ಬೀಜಿಂಗ್ ನಗರದಲ್ಲಿ 91 ಮಂದಿ ಕುಬೇರರು ಇದ್ದರೆ, ಮುಂಬೈನಲ್ಲಿ 92 ಮಂದಿ ಇದ್ದಾರೆ. ಮುಂಬೈ ಶತಕೋಟ್ಯಧಿಪತಿಗಳ ಒಟ್ಟು ಸಂಪತ್ತು 445 ಶತಕೋಟಿ ಡಾಲರ್, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 47ರಷ್ಟು ಅಧಿಕವಾಗಿದೆ.

ಹರೂನ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಶ್ರೀಮಂತರ ಪಟ್ಟಿ-2024ರಲ್ಲಿ ಈ ಅಂಕಿ ಅಂಶಗಳ ಬಗ್ಗೆ ಮಾಹಿತಿ ಇದೆ.

ಜಾಗತಿಕವಾಗಿ ನ್ಯೂಯಾರ್ಕ್ (119) ಮತ್ತು ಲಂಡನ್ (97) ಹೊರತುಪಡಿಸಿದರೆ ವಿಶ್ವದಲ್ಲೇ ಅತಿಹೆಚ್ಚು ಶ್ರೀಮಂತರನ್ನು ಹೊಂದಿದ ಮೂರನೇ ನಗರವಾಗಿ ಮುಂಬೈ ಸ್ಥಾನ ಪಡೆದುಕೊಂಡಿದೆ.

Tags:
error: Content is protected !!