ಇಂದು ( ಜನವರಿ 3 ) ಇರಾನ್ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಖಾಸಿಂ ಸುಲೇಮಾನಿ ಅವರ 3ನೇ ವರ್ಷದ ಪುಣ್ಯಸ್ಮರಣೆ ಇತ್ತು. ಹೀಗಾಗಿ ಕರ್ಮಾನ್ ನಗರದಲ್ಲಿರುವ ಖಾಸಿಂ ಸುಲೇಮಾನಿ ಸಮಾಧಿ ಬಳಿ ಹಲವಾರು ಮಂದಿ ಪಾಲ್ಗೊಂಡಿದ್ದರು.
ಇದನ್ನೇ ಗುರಿಯಾಗಿಸಿ ಬಾಂಬ್ ಸ್ಪೋಟ ನಡೆಸಲಾಗಿದ್ದು, ಖಾಸಿಂ ಸುಲೇಮಾನಿ ಸಮಾಧಿ ಸ್ಥಳದಲ್ಲಿ ಎರಡು ಬಾರಿ ಬಾಂಬ್ ಸ್ಪೋಟಗೊಂಡಿದೆ. ಸದ್ಯ ಸಾವಿನ ಸಂಖ್ಯೆ 100 ದಾಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಸದ್ಯ ಈ ಬಾಂಬ್ ಸ್ಪೋಟದಿಂದ ಸಾವಿಗೀಡಾದವರ ಹಾಗೂ ರಕ್ಷಣಾ ಕಾರ್ಯ ನಡೆಯುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು ಇರಾನ್‌ನ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ 20220ರ ಜನವರಿ 3ರಂದು ಬಾಗ್ದಾದ್ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಅಮೆರಿಕಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದರು.





