ನವದೆಹಲಿ: ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯು ಸುಂದರ ಹಾಗು ಅಳಿವಿನಂಚಿನಲ್ಲಿರುವ ಪ್ರಾಣಿ. ಈ ಭವ್ಯ ಜೀವಿ ಪ್ರಪಂಚದ ಆಯ್ದ ಪ್ರದೇಶಗಳಲ್ಲಿ ಮಾತ್ರ ಇವೆ ಅನ್ನೋದೇ ಅಚ್ಚರಿಯ ವಿಚಾರ.
ಅತೀ ಸುಂದರ ಹಾಗೂ ಭವ್ಯ ಜೀವಿ ಹುಲಿಯು ಸುಮಾರು ಕಡೆ ಇಲ್ಲವೇ ಇಲ್ಲ. ಭಾರತದಲ್ಲಿ ಅತೀಹೆಚ್ಚು ಹುಲಿಗಳಿದ್ದು, ದೇಶಕ್ಕೆ ಇದೊಂದು ಹೆಮ್ಮೆಯ ವಿಷಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತದಲ್ಲಿ ರಣಥಂಬೋರ್ ಹಾಗು ಬಾಂಧವಗಢದಂತಹ ಸ್ಥಳಗಳು ಹುಲಿಗಳ ನೆಲೆಗೆ ಹೆಸರುವಾಸಿಯಾಗಿವೆ. ಭಾರತ ಹೊರತುಪಡಿಸಿದರೆ ರಷ್ಯಾದಲ್ಲಿ ಅಮುರ್ ಹುಲಿಗಳು, ಇಂಡೋನೇಷ್ಯಾ ಸುಮಾತ್ರಾನ್ ಹುಲಿಗಳಿಗೆ ನೆಲೆಯಾಗಿದೆ. ನೇಪಾಳವು ಕೂಡ ಚಿತ್ವಾನ್ ಮತ್ತು ಬಾರ್ಡಿಯಾ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳನ್ನು ರಕ್ಷಿಸುತ್ತಿದೆ. ಇದಲ್ಲದೇ ಮಲೇಷ್ಯಾದ ಮಲಯನ್ ಹುಲಿಗಳು ಮಲಯ ಪರ್ಯಾಯ ದ್ವೀಪದಲ್ಲಿ ಸಂಚರಿಸುತ್ತವೆ. ಬಾಂಗ್ಲಾದೇಶವು ತನ್ನ ಮ್ಯಾಂಗ್ರೋವ್ ಕಾಡುಗಳಲ್ಲಿ ರಾಯಲ್ ಬೆಂಗಾಲ್ ಹುಲಿಗಳಿಗೆ ಆತಿಥ್ಯ ವಹಿಸುತ್ತದೆ.
ಇನ್ನೂ ಭಾರತದಲ್ಲಿ 2022ರ ಹುಲಿಗಣತಿಯಂತೆ 3167 ಹುಲಿಗಳನ್ನು ಹೊಂದಿರುವ ಮೂಲಕ ಈ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಹುಲಿಗಳನ್ನು ಸಂರಕ್ಷಣೆ ಮಾಡುವ ಪ್ರಯತ್ನದಲ್ಲಿ ಭಾರತವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಹಾಗೆಯೇ ಕಾಡು ಹುಲಿಗಳಿಗೆ ಭಾರತವು ಜಾಗತಿಕ ನೆಲೆಯಾಗಿದೆ.
ಇದಲ್ಲದೇ ಬೇರೆ ದೇಶಗಳಲ್ಲಿ ಅಂದರೆ ರಷ್ಯಾದಲ್ಲಿ 371, ಇಂಡೋನೇಷ್ಯಾದಲ್ಲಿ 371, ನೇಪಾಳದಲ್ಲಿ 355, ಮಲೇಷ್ಯಾದಲ್ಲಿ 120, ಬಾಂಗ್ಲಾದೇಶದಲ್ಲಿ 106, ಥೈಲ್ಯಾಂಡ್‌ನಲ್ಲಿ 149 ಹುಲಿಗಳಿಗೆ ಎಂದು ಅಂದಾಜಿಸಲಾಗಿದೆ.
ಈ ಎಲ್ಲಾ ದೇಶಗಳಿಗಿಂತ ನಮ್ಮ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿದ್ದು, ತನ್ನ ವಿಸ್ತಾರವಾದ ರಾಷ್ಟ್ರೀಯ ಉದ್ಯಾನವನಗಳಾದ ರಣಥಂಬೋರ್, ಜಿಮ್ ಕಾರ್ಬೆಟ್ ಮತ್ತು ಬಾಂಧವ್‌ಗಢ್‌ಗಳಲ್ಲಿ ಅನೇಕ ಸಂಖ್ಯೆಯಲ್ಲಿ ಹುಲಿಗಳನ್ನು ಕಾಣಬಹುದಾಗಿದೆ.



