ಜಪಾನ್‌ನ ಟೊಕಿಯೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪಾನ್ ಏರ್‌ಲೈನ್ಸ್‌ನ ಪ್ಯಾಸೆಂಜರ್ ವಿಮಾನವೊಂದು ರನ್‌ವೇಗೆ ಇಳಿಯುತ್ತಿದ್ದಂತೆ ಕೋಸ್ಟ್ ಗಾರ್ಡ್ ವಿಮಾನಕ್ಕೆ ಬೆಂಕಿ ಹೊಡೆದ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ.
ಇನ್ನು ಈ ವಿಮಾನದಲ್ಲಿ 12 ಸಿಬ್ಬಂದಿ ಹಾಗೂ 367 ಪ್ರಯಾಣಿಕರಿದ್ದು, ಎಲ್ಲರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆದರೆ ಡಿಕ್ಕಿಯಾದ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಒಟ್ಟು 6 ಜನರ ಪೈಕಿ ಐವರು ಮೃತರಾಗಿದ್ದಾರೆ. ವಿಮಾನ ಚಲಾಯಿಸುತ್ತಿದ್ದ ಕ್ಯಾಪ್ಟನ್ ಒಬ್ಬರು ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಕೋಸ್ಟ್ ಗಾರ್ಡ್‌ಗಳು ಜಪಾನ್‌ನಲ್ಲಿ ಸಂಭವಿಸಿರುವ ತೀವ್ರ ಭೂಕಂಪದ ರಕ್ಷಣಾ ಕಾರ್ಯಕ್ಕೆ ತೆರಳುತ್ತಿದ್ದರು.





