ಜೆರುಸಲೇಂ : ಹಮಾಸ್ ಹೋರಾಟಗಾರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಇಸ್ರೇಲ್ ಯುದ್ಧ ಘೋಷಿಸಿದ್ದು, ಶತ್ರುಗಳು ಇದಕ್ಕಾಗಿ ತಕ್ಕ ಬೆಲೆ ತೆರಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಘೋಷಿಸಿದ್ದಾರೆ.
ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ. ಇದು ಕಾರ್ಯಾಚರಣೆಯಲ್ಲ, ಇದು ಯುದ್ಧ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ಹಮಾಸ್ ಇದಕ್ಕೆ ಅಭೂತಪೂರ್ವ ಬೆಲೆಯನ್ನು ತೆರಲಿದೆ. ಶತ್ರುಗಳು ಹಿಂದೆಂದೂ ತಿಳಿದಿರದ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಎದುರಿಸಲಿದ್ದಾರೆ ಎಂದು ಅವರು ಹೇಳಿದರು.
ಹಮಾಸ್‌ನ ಮಿಲಿಟರಿ ಪಡೆ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಸದಸ್ಯರು ದಕ್ಷಿಣ ಇಸ್ರೇಲಿ ಪಟ್ಟಣಗಳಾದ ನೆಟಿವೋಟ್ ಮತ್ತು ಒಫಾಕಿಮ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.





