ಚೀನಾ: ಲೀಯು ಎಂಬ ಚೀನಾದ ವೃದ್ಧೆಯೋರ್ವಳು ತನ್ನ ಮಕ್ಕಳ ವರ್ತನೆಯಿಂದ ಬೇಸತ್ತು, ತಾನು ಸಾಕಿದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಆಸ್ತಿ ಬರೆದಿದ್ದಾಳೆ.
ಚೀನಾದ ಶಾಂಘೈನಲ್ಲಿ ಈ ಘಟನೆ ನಡೆದಿದ್ದು, ಲೀಯು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಅವರನ್ನು ಭೇಟಿಯಾಗಲು ಅವರ ಮಕ್ಕಳು ಬರಲಿಲ್ಲ.
ಫೋನ್ ಮಾಡಿಯೂ ಮಾತನಾಡಲಿಲ್ಲ. ತಾಯಿಯ ಬಗ್ಗೆ ಮಕ್ಕಳಿಗೆ ಯಾವುದೇ ಕಾಳಜಿ ಇಲ್ಲದಂತೆ, ಮಕ್ಕಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಲೀಯು ಜೊತೆ ಪ್ರತಿದಿನವೂ ನಿಯತ್ತಿನಿಂದ ಇದ್ದಿದ್ದು ಮಾತ್ರ, ಅವಳು ಸಾಕಿದ್ದ ನಾಯಿ ಮತ್ತು ಬೆಕ್ಕು.
ಇದೀಗ ಲೀಯು ತನ್ನ 23 ಕೋಟಿಗೂ ಮೀರಿದ ಆಸ್ತಿಯನ್ನು ತಾನು ಸಾಕಿದ ನಾಯಿ ಮತ್ತು ಬೆಕ್ಕಿಗೆ ಬರೆದಿಟ್ಟಿದ್ದಾರೆ. ಆಕೆಯ ಸಾವಿನ ಬಳಿಕ ಆ ಆಸ್ತಿ ಪಶು ಚಿಕಿತ್ಸಾಲಯಕ್ಕೆ ಸೇರುತ್ತದೆ. ಮತ್ತು ಅವರು ಈಕೆಯ ಸಾಕು ಪ್ರಾಣಿಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಲೀಯು, ನನ್ನ ಮಕ್ಕಳು ನನಗೆ ಅನಾರೋಗ್ಯವೆಂದು ಗೊತ್ತಿದ್ದರೂ, ನನ್ನನ್ನು ಬಂದು ಭೇಟಿಯಾಗಲಿಲ್ಲ. ಫೋನನ್ ಮಾಡಿಯಾದರೂ ಮಾತನಾಡಬಹುದಿತ್ತು.
ಅದನ್ನೂ ಮಾಡಲಿಲ್ಲ. ನನ್ನೊಂದಿಗೆ ಪ್ರೀತಿಯಿಂದ ಇರುವುದು ನಾನು ಸಾಕಿದ ನಾಯಿ ಮತ್ತು ಬೆಕ್ಕು. ಹಾಗಾಗಿ ಇವುಗಳ ಹೆಸರಿಗೆ ನನ್ನ ಆಸ್ತಿಯನ್ನು ಬರೆದಿದ್ದೇನೆ. ನನ್ನ ಮರಣದ ನಂತರ, ಈ ಮಕ್ಕಳನ್ನು ಯಾರು ಕಾಳಜಿಯಿಂದ ಕಾಣುತ್ತಾರೋ, ಅವರಿಗೆ ನನ್ನೆಲ್ಲ ಆಸ್ತಿ ಹೋಗುತ್ತದೆ ಎಂದಿದ್ದಾರೆ.