Mysore
20
overcast clouds
Light
Dark

ದಕ್ಷಿಣ ಅಮೇರಿಕ ಕಾಡಿನಲ್ಲಿ ಬೆಂಕಿ : ೯೯ ಮಂದಿ ಸಾವು !

ದಕ್ಷಿಣ ಅಮೆರಿಕ: ಚಿಲಿಯ ಕಾಡುಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಬೆಂಕಿಯಿಂದಾಗಿ  99 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಘಟನೆಯಲ್ಲಿ 1,600ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯಿಂದಾಗಿ ಅಪಾರ ಸಂಖ್ಯೆಯ ಜನರು ಸುಟ್ಟು ಕರಕಲಾಗಿದ್ದಾರೆ. ಹಲವೆಡೆ ರಸ್ತೆಗಳಲ್ಲಿ ಜನರ ಮೃತದೇಹಗಳೂ ಪತ್ತೆಯಾಗಿವೆ.

ಭೀಕರ ಬೆಂಕಿಯ ದೃಷ್ಟಿಯಿಂದ , ಚಿಲಿ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸಂಪನ್ಮೂಲಗಳ ಕೊರತೆಯಿಲ್ಲ ಎಂದು ಸರ್ಕಾರ ಹೇಳಿದೆ.

ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳದ ಬಳಿ ದಟ್ಟವಾದ ಜನವಸತಿ ಇದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. 92 ಅರಣ್ಯಗಳಿಗೆ ಬೆಂಕಿ ಆವರಿಸಿದೆ. ಕಾಡುಗಳು ಉರಿಯುತ್ತಿವೆ ಮತ್ತು ಅವುಗಳಿಂದ ಭಯಾನಕ ಜ್ವಾಲೆ ಮತ್ತು ಹೊಗೆ ಏರುತ್ತಿದೆ. ಜನರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ