ನವದೆಹಲಿ: ಸೌದಿಯಿಂದ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ. ಗುಜರಾತ್ ವೆರಾವಲ್ ಕರಾವಳಿಯಿಂದ ಸುಮಾರು 217 ನಾಟಿಕಲ್ ಮೈಲಿ ದೂರ ಅರಬ್ಬಿ ಸಮುದ್ರದಲ್ಲಿ ಇಸ್ರೆಲ್ ಸಂಯೋಜಿತ ವ್ಯಾಪಾರಿ ಹಡಗೊಂದರ ಮೇಲೇ ಅಪರಿಚಿತ ಡ್ರೋನ್ ದಾಳಿ ಶನಿವಾರ ನಡೆದಿರುವುದು ವರದಿಯಾಗಿದೆ.
ತೈಲ ಟ್ಯಾಂಕುಗಳನ್ನು ಹೊತ್ತು ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ ಲೈಬೀರಿಯನ್ ಹಡಗಿನ ಮೇಲೆ ದಾಳಿಯಾಗಿದ್ದು, ಹಡಗಿಗೆ ಭಾಗಶಃ ಹಾನಿಯಾಗಿದೆ. ಕೆಲವೆಡೆ ನೀರು ನುಗ್ಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಘಟನೆಯ ಬಗ್ಗೆ ಇದುವರೆಗೆ ಭಾರತೀಯ ನೌಕಾದಳ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಲ್ಲ. ಹಾಗೇಯೇ ಡ್ರೋನ್ ದಾಳೀಯ ಹೊಣೆಯನ್ನು ಇವರೆಗೂ ಯಾರೂ ಹೊತ್ತುಕೊಂಡಿಲ್ಲ.
ಇಸ್ರೇಲ್, ಪ್ಯಾಲೆಸ್ಟೀನ್ ನಡುವೆ ಯುದ್ಧ ನಡೆಯುತ್ತಿರುವಾಗ ಇಸ್ರೇಲ್ ಹಡಗುಗಳ ಮೇಲೆ ಇರಾನ್ ಬೆಂಬಲಿರ ಹೌತಿ ಉಗ್ರರು ದಾಳಿ ಮಾಡಿದ್ದರು.