Mysore
20
overcast clouds
Light
Dark

Corruption Index 2023: ವಿಶ್ವದ ಭ್ರಷ್ಟ ರಾಷ್ಟ್ರಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?

ಟ್ರಾನ್ಪರೆನ್ಸಿ ಇಂಟರ್‌ನ್ಯಾಷನಲ್ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2023ರ ಪಟ್ಟಿಯನ್ನು ಪ್ರಕಟಿಸಿದ್ದು, 180 ದೇಶಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿಯೂ ಸಹ ಡೆನ್‌ಮಾರ್ಕ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತ 39 ಅಂಕಗಳನ್ನು ಪಡೆದು 93ನೇ ಸ್ಥಾನದಲ್ಲಿದೆ. ಕಳೆದ ಬಾರಿಯ ಪಟ್ಟಿಯಲ್ಲಿ 40 ಅಂಕಗಳನ್ನು ಪಡೆದುಕೊಂಡಿದ್ದ ಭಾರತ 85ನೇ ಸ್ಥಾನದಲ್ಲಿತ್ತು.

ಡೆನ್‌ಮಾರ್ಕ್‌ ಸತತ ಆರನೇ ಬಾರಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು ಕಡಿಮೆ ಭ್ರಷ್ಟಾಚಾರವಿರುವ ದೇಶವೆನಿಸಿಕೊಂಡರೆ, ಸೋಮಾಲಿಯಾ ದೇಶ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಅಂಕಗಳನ್ನು ನೀಡುವ ಮೂಲಕ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟಾರೆ ದೇಶಗಳ ಪಟ್ಟಿಯಲ್ಲಿ ಮೂರನೇ ಎರಡರಷ್ಟು ದೇಶಗಳು 50ಕ್ಕಿಂತ ಕಡಿಮೆ ಅಂಕಗಳನ್ನು ಪಡೆದುಕೊಂಡಿವೆ. ಫಿನ್‌ಲ್ಯಾಂಡ್‌ ಎರಡನೇ ಸ್ಥಾನ ಹಾಗೂ ನ್ಯೂಜಿಲೆಂಡ್‌ ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ. 

ಏಷ್ಯಾ ದೇಶಗಳ ಸ್ಥಾನಗಳೇನು?

ಭಾರತ 39 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಈ ಪಟ್ಟಿಯಲ್ಲಿ 93ನೇ ಸ್ಥಾನದಲ್ಲಿದ್ದು, 42 ಅಂಕಗಳನ್ನು ಪಡೆದುಕೊಂಡಿರುವ ಚೀನಾ 76ನೇ ಸ್ಥಾನದಲ್ಲಿದೆ. 29 ಅಂಕಗಳನ್ನು ಪಡೆದುಕೊಂಡಿರುವ ಪಾಕಿಸ್ತಾನ 133ನೇ ಸ್ಥಾನವನ್ನು ಪಡೆದುಕೊಂಡಿದೆ. 20 ಅಂಕಗಳನ್ನು ಪಡೆದುಕೊಂಡಿರುವ ಅಪ್ಘಾನಿಸ್ತಾನ 162ನೇ ಸ್ಥಾನದಲ್ಲಿದೆ. ಚೀನಾದ ಅಂಕ ಕಳೆದ ಪಟ್ಟಿಗೆ ಹೋಲಿಸಿದರೆ ಮೂರರಷ್ಟು ಕಡಿಮೆಯಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ