Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಇಸ್ರೇಲ್ ನಲ್ಲಿ ಮುಂದುವರಿದ ಹಮಾಸ್ ಉಗ್ರರ ಅಟ್ಟಹಾಸ: ಮೃತರ ಸಂಖ್ಯೆ 300ಕ್ಕೆ ಏರಿಕೆ

ಜೆರುಸೆಲೇಂ : ಇಸ್ರೇಲ್ ದೇಶದ ಮೇಲೆ ಶನಿವಾರ ಪ್ಯಾಲೆಸ್ಟೀನ್‌ನ ಹಮಾಸ್ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಿಂದ ಮೃತಪಟ್ಟವರ ಸಂಖ್ಯೆ 300 ತಲುಪಿದೆ ಎಂದು ಇಸ್ರೇಲ್‌ನ ಹೀಬ್ರೂ ಭಾಷೆಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್​ ಅಧಿಕಾರಿಗಳು, ಟೈಮ್ಸ್ ಆಫ್ ಇಸ್ರೇಲ್‌ ಪತ್ರಿಕೆಗೆ ನೀಡಿದ ಮಾಹಿತಿ ಪ್ರಕಾರ, ದಾಳಿಯಲ್ಲಿ ಅಂದಾಜು 1,590 ಜನರು ತೀವ್ರವಾಗಿ ಗಾಯಗೊಂಡಿದ್ದು, ಹಲವರು ಜೀವನ್ಮರಣದ ಹೋರಾಟ ಮಾಡುತ್ತಿದ್ದಾರೆ. ಐಜಿಎಫ್‌ (ಇಸ್ರೇಲ್ ರಕ್ಷಣಾ ಪಡೆ) ಕೆಲವು ಸೈನಿಕರು, ನಾಗರಿಕರನ್ನು ಅಪಹರಿಸಿ ಗಾಜಾಕ್ಕೆ ಕರೆತಂದು ಒತ್ತೆಯಾಳುಗಳಾನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 6:30ರ ಸುಮಾರಿಗೆ ಗಾಜಾದಿಂದ ಇಸ್ರೇಲ್‌ ಮೇಲೆ 5,000ಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ಗುಂಡಿನ ಸುರಿಮಳೆ ನಡೆದಿದೆ. ಟೆಲ್ ಅವಿವ್, ರೆಹೋವೊಟ್, ಗೆಡೆರಾ ಮತ್ತು ಅಶ್ಕೆಲೋನ್ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸಲಾಗಿದೆ. ಹಮಾಸ್ ಭಯೋತ್ಪಾದಕರು ಗಾಜಾ ಪಟ್ಟಿಯಿಂದ ಇಸ್ರೇಲ್‌ ಪ್ರವೇಶಿಸಿ ವಿವಿಧ ಪಟ್ಟಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಹಮಾಸ್ ಮಿಲಿಟರಿ ಕಮಾಂಡರ್ ಮುಹಮ್ಮದ್ ಅಲ್-ಡೀಫ್ ಈ ಕಾರ್ಯಾಚರಣೆಯನ್ನು ‘ಅಲ್-ಅಕ್ಸಾ ಸ್ಟಾರ್ಮ್’ ಎಂದು ಕರೆದಿದ್ದಾರೆ. “ಮಹಿಳೆಯರ ಮೇಲಿನ ದಾಳಿಗಳು, ಜೆರುಸಲೆಮ್‌ನ ಅಲ್-ಅಕ್ಸಾ ಮಸೀದಿಯ ಅಪವಿತ್ರಗೊಳಿಸುವಿಕೆ ಹಾಗು ಗಾಜಾದ ಮೇಲೆ ನಡೆಯುವ ಮುತ್ತಿಗೆಗೆ ಪ್ರತಿಯಾದ ಸೇಡು ಇದು” ಎಂಬ ಹೇಳಿಕೆ ನೀಡಿದ್ದು ಸಿಎನ್‌ಎನ್ ವರದಿ ಮಾಡಿದೆ.
ದಿ ವಾಷಿಂಗ್ಟನ್ ಪೋಸ್ಟ್ ಇಸ್ಟೇಲ್ ಕೆಲವು ಗ್ರಾಫಿಕ್ ವೀಡಿಯೊಗಳು ಬಿಡುಗಡೆಗೊಳಿಸಿದ್ದು, ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳ ದಾಳಿಯ ನಂತರ ದಕ್ಷಿಣದ ನಗರವಾದ ಸ್ಡೆರೋಟ್‌ನ ಬೀದಿಗಳಲ್ಲಿ ಅಲ್ಲಲ್ಲಿ ಬಿದ್ದ ಮೃತದೇಹಗಳನ್ನು ತೋರಿಸಿವೆ. ಕಾರುಗಳು ಬುಲೆಟ್‌ಗಳಿಂದ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡು ಉರಿಯುತ್ತಿವೆ.ಈ ನಡುವೆ, ಗಾಜಾದ ಉತ್ತರದ ಜಿಕಿಮ್ ಬೀಚ್ ಮೂಲಕ ಇಸ್ರೇಲ್‌ಗೆ ನುಸುಳುತ್ತಿದ್ದ ಏಳು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಇಸ್ರೇಲ್‌ನೊಳಗೆ ಹಮಾಸ್ ಭಯೋತ್ಪಾದಕರು ನುಗ್ಗಿ ಒಳಬರದಂತೆ ತಡೆಯಲು ಹೋರಾಟ ಮುಂದುವರಿದಿದೆ ಎಂದು ಐಡಿಎಫ್ ಹೇಳಿದೆ.

ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಇತ್ತೀಚೆಗಷ್ಟೇ ಗಾಜಾದಲ್ಲಿ ಹಮಾಸ್ ಬಳಸುತ್ತಿದ್ದ ಮೂರು ಕಾರ್ಯಾಚರಣಾ ತಾಣಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಮಿಲಿಟರಿ ಹೇಳುತ್ತದೆ. ದಕ್ಷಿಣದ ಪಟ್ಟಣ ಒಫಾಕಿಮ್‌ನಲ್ಲಿರುವ ಮನೆಯಲ್ಲಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಜನರನ್ನು ಭಯೋತ್ಪಾದಕರು ಕೊಂದು ಹಾಕಿದ್ದಾರೆ. ಸದ್ಯ ಭಯೋತ್ಪಾದಕರಿಂದ ಇಸ್ರೇಲ್ ದೇಶದ ಕೆಲವು ಭಾಗಗಳನ್ನು ಮರಳಿ ಪಡೆದಿಲ್ಲ ಎಂದು IDFನ ವಕ್ತಾರರು ಮಾಹಿತಿ ನೀಡಿದ್ದಾರೆ.ಶನಿವಾರ ಉಗ್ರಗಾಮಿ ಗುಂಪು ಹಮಾಸ್‌ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಗಾಜಾದೊಳಗೆ ಇಸ್ರೇಲ್​ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಯುದ್ಧ ಮುಂದುವರಿದಿದೆ. ಸದ್ಯಕ್ಕೆ ಸಂಪೂರ್ಣವಾಗಿ ನಮ್ಮ ಎಲ್ಲ ನೆಲೆಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಸ್ರೇಲ್‌ನ ಲೆಫ್ಟಿನೆಂಟ್ ಕರ್ನಲ್ ಜೊನಾಥನ್ ಕಾನ್ರಿಕಸ್ ತಿಳಿಸಿದ್ದಾರೆ.

ಹಮಾಸ್ ಭಯೋತ್ಪಾದಕರ ದಾಳಿಯನ್ನು ಸಂಪೂರ್ಣವಾಗಿ ಇಸ್ರೇಲ್ ರಕ್ಷಣಾ ಪಡೆಗಳು ಹಿಮ್ಮಟ್ಟಿಸಲಿವೆ. ದಾಳಿಗೆ ತಕ್ಕ ಪ್ರತ್ಯುತ್ತುರ ನೀಡಲಿದ್ದೇವೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಮುಗ್ಧ ನಾಗರಿಕರು, ಮಕ್ಕಳು ಮತ್ತು ಹಿರಿಯರನ್ನು ಕೊಂದು ಹಾಕಿದ್ದಾರೆ. ಇದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಇಸ್ರೇಲಿ ಪ್ರಧಾನಿ ಭಾನುವಾರ ‘X’ ನಲ್ಲಿ ಬರೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!