ಕಠ್ಮಂಡು: ನೇಪಾಳದ ಡಾಂಗ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯರು ಸೇರಿ ೧೨ ಮಂದಿ ಸಾವಿಗೀಡಾಗಿದ್ದಾರೆ.
ಈ ಅಪಘಾತ ಕುರಿತು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ನೀಡಿವೆ.
ಬಾಂಕೆ ಜಿಲ್ಲೆಯ ನೇಪಾಳದಗಂಜ್ನಿಂದ ಕಠ್ಮಂಡುವಿಗೆ ಪ್ರಯಾಣ ಮಾಡುತ್ತಿದ್ದ ಬಸ್, ಜಿಲ್ಲೆಯ ಭಾಲುಬಾಂಗ್ ಸೇತುವೆಯಿಂದ ಕೆಳಜಾರಿ ರಾಪ್ತಿ ನದಿಗೆ ಉರುಳಿಬಿದ್ದಿದೆ.
ಈ ಅಪಘಾತದಲ್ಲಿ ೧೨ ಮಂದಿ ಮೃತಪಟ್ಟಿದ್ದು, ೨೨ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮರಣ ಹೊಂದಿದ ೧೨ ಮಂದಿಯಲ್ಲಿ ಇಬ್ಬರು ಭಾರತೀಯರು ಹಾಗೂ ಇಬ್ಬರು ಸ್ತಳೀಯರೆಂದು ಗುರುತಿಸಲಾಗಿದ್ದು ಉಳಿದ ೮ ಮಂದಿಯ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಅಧಕಾರಿ ಉಜ್ವಲ್ ಬಹಾದುರ್ ಸಿಂಗ್ ತಿಳಿಸಿದ್ದಾರೆ.