ಮಾನ್ವಿ: ತಾಲ್ಲೂಕಿನ ನೀರವಾನ್ವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿ ಕ್ಯಾಂಪ್‌ನಲ್ಲಿ ಶಂಕಿತ ಝಿಕಾ ವೈರಸ್ ಜ್ವರ ಪತ್ತೆಯಾಗಿದೆ.
.
ಕೋಳಿ ಕ್ಯಾಂಪ್ ನಿವಾಸಿ ನಾಗರಾಜ ಎಂಬವರ ಪುತ್ರಿ ಪವಿತ್ರಾ(೫) ಶಂಕಿತ ಝಿಕಾ ವೈರಸ್ ಜ್ವರಪೀಡಿತಳಾಗಿದ್ದು ಚಿಕಿತ್ಸೆ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಕೆಲ ದಿನಗಳ ಹಿಂದೆ ಅನಾರೋಗ್ಯ ಪೀಡಿತ ಮಗು ಪವಿತ್ರಾಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗ ಶಂಕಿತ ಝಿಕಾ ವೈರಸ್ ಜ್ವರ ದೃಢಪಟ್ಟಿತ್ತು. ಭಾನುವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಮತ್ತು ಸಿಬ್ಬಂದಿ ಕೋಳಿ ಕ್ಯಾಂಪ್‌ಗೆ ಭೇಟಿ ನೀಡಿ, ಸೊಳ್ಳೆಗಳ ನಿಯಂತ್ರಣ ಹಾಗೂ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಿದರು.





