ಕಳೆದ ಮಾರ್ಚ್ 29ರಂದು ತೆರೆಗೆ ಅಪ್ಪಳಿಸಿದ್ದ ರಾಜ್‌ವಂಶದ ಕುಡಿ ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರಮಂದಿರಗಳಲ್ಲಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ.
ಕೊರೊನಾ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳು ಬಹುಬೇಗನೆ ಓಟಿಟಿ ಪ್ರವೇಶಿಸುವುದು ಸಾಮಾನ್ಯವಾಗಿದೆ. ಆದರೆ ಇದೀಗ ಯುವ ಚಿತ್ರ ಬಿಡುಗಡೆಯಾದ ಕೇವಲ 21 ದಿನಗಳಿಗೆ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಅಂದಹಾಗೆ ಯುವ ಚಿತ್ರ ಅಮೆಜಾನ್ ಪ್ರೈಮ್ ಓಟಿಟಿ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಸದ್ಯಕ್ಕೆ ಬಾಡಿಗೆ ಆಧಾರದ ಮೇಲೆ ಮಾತ್ರ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಹೌದು, ಅಮೆಜಾನ್ ಪ್ರೈಮ್ ಚಂದಾದಾರತ್ವ ಹೊಂದಿರುವ ಎಲ್ಲರೂ ಸಹ ಈ ಚಿತ್ರವನ್ನು ವೀಕ್ಷಿಸಲಾಗುವುದಿಲ್ಲ. ಯುವ ಚಿತ್ರವನ್ನು ವೀಕ್ಷಿಸಬೇಕೆಂದರೆ 349 ರೂಪಾಯಿಗಳನ್ನು ಪಾವತಿಸಿ ಬಾಡಿಗೆಗೆ ಪಡೆಯಬೇಕಿದೆ.





