ಅಜಯ್‌ರಾವ್ ನಟಿಸಿ ನಿರ್ಮಿಸಿರುವ ʼಯುದ್ದಕಾಂಡʼ ಸಿನಿಮಾವು ಇದೇ ತಿಂಗಳ ಏ.18 ರಂದು ರಾಜ್ಯಾದ್ಯಾಂತ ತೆರೆಗೆ ಬರಲಿದೆ.
ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಮಕ್ಕಳ ದುರ್ಬಳಕೆ ಕುರಿತಾದ ಕಥಾಹಂದರ ಹೊಂದಿದ್ದು, ನ್ಯಾಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕಥೆಯಾಗಿದೆ.
ಚಿತ್ರದಲ್ಲಿ ಅನ್ಯಾಯಕ್ಕೊಳಗಾದ ಹೆಣ್ಣೊಬ್ಬಳು ನ್ಯಾಯಕ್ಕಾಗಿ ಹೋರಾಡುತ್ತಾಳೆ. ಆಕೆ ನಮ್ಮ ಸಮಾಜದ ಎಲ್ಲ ಹೆಣ್ಣು ಮಕ್ಕಳ ಪ್ರತಿನಿಧಿ. ಇದು ಯಾವುದೇ ಓರ್ವ ಹೆಣ್ಣು ಮಗಳಿಗೆ ಸೀಮಿತವಾದ ಕಥೆಯಲ್ಲ ಎಂದು ಅಜಯ್ ರಾವ್ ಹೇಳಿದರು.
ಈ ಚಿತ್ರಕ್ಕೆ ಪವನ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಅಜಯ್‌ರಾವ್‌ಗೆ ನಾಯಕಿಯಾಗಿ ಅರ್ಚನಾ ಜೋಯಿಸ್ ನಟಿಸಿದ್ದು, ಪ್ರಕಾಶ್ ಬೆಳವಾಡಿ, ಟಿ.ಎಸ್.ನಾಗಾಭರಣ್ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರವೀಣ್ ಭಟ್ ಸಂಗೀತ ನೀಡಿದ್ದು, ಕಾರ್ತಿಕ್ ಛಾಯಾಚಿತ್ರಗ್ರಹಣ ಮಾಡಿದ್ದಾರೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.





