Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮದುವೆ ಸಂಭ್ರಮ: ಹಳದಿ ಶಾಸ್ತ್ರದಲ್ಲಿ ಮಿಂಚಿದ ಡಾಲಿ ಧನಂಜಯ್‌-ಧನ್ಯತಾ

ಮೈಸೂರು: ನಟ ಡಾಲಿ ಧನಂಜಯ್‌ ಹಾಗೂ ಡಾಕ್ಟರ್‌ ಧನ್ಯತಾ ನಿವಾಸದಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ನವ ಜೋಡಿಗಳು ಹಳದಿ ಶಾಸ್ತ್ರದಲ್ಲಿ ಮಿಂಚಿದ್ದಾರೆ.

ಧನಂಜಯ್‌ ಮತ್ತು ಧನ್ಯತಾ ಅವರ ಹಳದಿ ಶಾಸ್ತ್ರ ಶುಕ್ರವಾರ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ನಡೆದಿದ್ದು ಕುಟುಂಬದವರು, ನಟ, ನಟಿಯರು, ಹಾಗೂ ಸ್ನೇಹಿತರು ಆಗಮಿಸಿ ಶುಭ ಕೋರಿದ್ದಾರೆ. ಅಲ್ಲದೇ ಈ ಹಳದಿ ಶಾಸ್ತ್ರಕ್ಕೆ ಜರ್ಮನಿಯ ರಂಗ ನಿರ್ದೇಶಕ ಕ್ರಿಸ್ಟೆನ್‌ ಭಾಗವಹಿಸಿದ್ದು ಸಹ ವಿಶೇಷವಾಗಿತ್ತು.

ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು(ಫೆಬ್ರವರಿ.15) ನಟ ಮತ್ತು ಡಾಕ್ಟರ್‌ ಜೋಡಿಯ ಆರತಕ್ಷತೆ ನಡೆಯಲಿದೆ. ಇಂದು ಬೆಳಿಗ್ಗೆಯಿಂದಲೇ ಮದುವೆಗೆ ಸಂಬಂಧಪಟ್ಟ ಎಲ್ಲಾ ಶಾಸ್ತ್ರಗಳು ನಡೆಯಲಿವೆ. ಇನ್ನು ಸಂಜೆ 6 ಗಂಟೆಯ ನಂತರ ಆರಕ್ಷತೆ ಕಾರ್ಯಕ್ರಮ ಇರಲಿದೆ.

ನಾಳೆ(ಫೆಬ್ರವರಿ.16) ಬೆಳಿಗ್ಗೆ ಧಾರಾ ಮುಹೂರ್ತ ನಡೆಯಲಿದೆ. ಆರಕ್ಷತೆಗೆ ಸ್ಯಾಂಡಲ್‌ವುಡ್‌ ತಾರೆಯರು, ರಾಜಕೀಯ ರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ.

Tags:
error: Content is protected !!