ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ನೋಡಲು 4ನೇ ಬಾರಿ ಪತ್ನಿ ವಿಜಯಲಕ್ಷ್ಮೀ ಬಂದಿದ್ದರು. ಅತ್ತಿಗೆ ಜೊತೆ ತಮ್ಮ ದಿನಕರ್ ತೂಗುದೀಪ್ ಕೂಡ ಜೈಲಿಗೆ ಭೇಟಿ ನೀಡಿದ್ದರು.
ದರ್ಶನ್ ಜೈಲಿಗೆ ಹೋದ ಬಳಿಕ ಪ್ರಕರಣದ ಹೋರಾಟದ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮೀ ಅವರೇ ತೆಗೆದುಕೊಂಡಿದ್ದು, ದರ್ಶನ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಪ್ರಕರಣದ ಹೋರಾಟದ ಕುರಿತು ಚರ್ಚಿಸಲು ಮತ್ತು ದರ್ಶನ್‌ರನ್ನು ನೋಡಲು ವಿಜಯಲಕ್ಷ್ಮೀ ಮತ್ತು ದಿನಕರ್ ಜೊತೆ ಅಕ್ಕನ ಮಗ ಚಂದನ್ ಕೂಡ ಜೈಲಿಗೆ ಭೇಟಿ ನೀಡಿದ್ದರು.
ಜೈಲಿನಲ್ಲಿ ಪ್ರಕರಣದ ಹೋರಾಟದ ಬಗ್ಗೆ ದರ್ಶನ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ನಟ ದರ್ಶನ್‌ಗೆ ಯಾವಾಗ ಜಾಮೀನು ಸಿಗುತ್ತೆ ಎಂಬುದೇ ಅಭಿಮಾನಿಗಳಿಗೆ ಕಾಡುವ ಪ್ರಶ್ನೆಯಾಗಿದೆ.
ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಸಹೋದರ ದಿನಕರ್ ಹಾಗೂ ದರ್ಶನ್ ಅಕ್ಕನ ಮಗ ಚಂದನ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ, ಧೈರ್ಯ ಹೇಳಿದ್ದಾರೆ.





