ಮುಂಬೈ: ಬಾಲಿವುಡ್‌ನ ಹಿರಿಯ ನಟ ದೇಬ್ ಮುಖರ್ಜಿ (83) ವಯೋಸಹಜ ಕಾಯಿಲೆಯಿಂದ ಇಂದು ಮಾ.14 ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
1965 ರಿಂದಲೂ ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ನಟನೆಯ ಜೊತೆಗೆ ನಿರ್ಮಾಣದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಬಾಲಿವುಡ್‌ನ ತಾರೆಯರು ದೇಬ್‌ನ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದು, ಇಂದು ಸಂಜೆ ವೇಳೆಗೆ ಮುಂಬೈನಲ್ಲಿ ನಟನ ಅಂತಿಮ ಸಂಸ್ಕಾರ ನಡೆಯಲಿದೆ.
ದೇಬ್ ಅಭಿನೇತ್ರಿ, ಏಕ್ ಬಾರ್ ಮುಸ್ಕುರಾದೊ, ಆಸೂ ಬನ್ ಗಯೇ ಪೂಲ್ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ಕಮೀನೆ ಅವರ ನೊನೆಯ ಸಿನಿಮಾ. ಆದಾದ ಬಳಿಕ ಅವರು ಸಿನಿಮಾ ರಂಗದಿಂದ ದೂರು ಉಳಿದಿದ್ದರು.





