Mysore
31
scattered clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ನಟ ದುನಿಯಾ ವಿಜಯ್ ಗೆ ಸಂಕಷ್ಟ: ಭೀಮನಿಗೆ ಸಿಸಿಬಿ ನೋಟಿಸ್ ಸಾಧ್ಯತೆ

ಮೈಸೂರು: ಕನ್ನಡ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎಂಬ ಕೂಗಿನ ನಡುವೇ, ಇತ್ತೀಚೆಗೆ ತೆರೆ ಕಂಡ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ ಚಿತ್ರಮಂದಿರಕ್ಕೆ ಜನ ಕರೆತರುವಲ್ಲಿ ಯಶಸ್ವಿ ಕಾಣುತ್ತಿದೆ.

ಚಂದನವನದಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಭೀಮ ಸಿನಿಮಾವನ್ನು ವಿಜಯ್ ನಿರ್ದೇಶಿಸಿ ನಟಿಸಿದ್ದಾರೆ. ದುನಿಯಾ ವಿಜಯ್ ಸಿನಿಮಾಗಳ ಹಿಟ್ ಲೀಸ್ಟ್ಗೆ ಮತ್ತೊಂದು ಸಿನಿಮಾ ಸೇರಿದೆ. ಆದರೆ ಸಿನಿಮಾ ಪ್ರಮೋಷನ್ ನಟ ದುನಿಯಾ ವಿಜಯ್ ಗೆ ಕಂಟಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಮಾದಕ ವಸ್ತುಗಳ ಕುರಿತು ಬಿಂಬಿತವಾಗಿರುವ ಭೀಮಾ ಸಿನಿಮಾದಲ್ಲಿ ಅವುಗಳನ್ನು ತೊಡೆದು ಹಾಕಲು ಪೊಲೀಸರು ಹರಸಾಹಸ ಮಾಡುತ್ತಾರೆ. ರಿಲೀಸ್ ಆದ್ಮೇಲೆ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ಚೇಸ್ ಮಾಡುವ ರೀತಿ ಬೈಕ್ ಏರಿ ಚೇಸ್ ಮಾಡಿ ಮಾದಕ ಗಾಂಜ ಅಡ್ಡೆಗಳ ಬಳಿ ಹೋಗಿದ್ದರು.

ಇನ್ನೂ ಅಲ್ಲೇ, ಬಿದ್ದಿದ್ದ ಮಾದಕ ವಸ್ತುಗಳನ್ನು ತೋರಿಸಿ ರಿಪೋರ್ಟ್ ಮಾಡಿ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಬಿಟ್ಟಿದ್ದರು. ಇನ್ನೂ ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ದುನಿಯಾ ವಿಜಯ್ ಆರೋಪಿಸಿದ್ದರು.

ಸದ್ಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಬಳಸುವವರನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಲು ಸಿದ್ಧವಾಗಿದ್ದಾರೆ ಮತ್ತೊಂದು ಕಡೆ ದುನಿಯಾ ವಿಜಯ್ ಗೆ ನೊಟೀಸ್ ಕೊಟ್ಟು ಕರೆಸಿ ವಿಚಾರಣೆ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ.

ಆಗಸ್ಟ್ 9 ಕ್ಕೆ ರಿಲೀಸ್ ಆಗಿರುವ ಭೀಮಾ ಚಿತ್ರ ಬಿಡುಗಡೆಯಾದ ವೇಳೆ ಚಾಮರಾಜನಗರದ ಕೆಲವು ಏರಿಯಾಗಳು ಮಾರುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ.

ಸಿಸಿಬಿ ಕಚೇರಿ ಬಳಿ ಡ್ರಗ್ ಮಾರಾಟದ ಬಗ್ಗೆ ಸಾಕ್ಷಿ ಇದೇ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಲು ಭೀಮ ನಾಯಕ ವಿಜಿಯನ್ನು ಕರೆಸಲು ಸಿಸಿಬಿ ಅಧಿಕಾರಿಗಳು ಚಿಂತನೆ ಮಾಡಿದ್ದಾರೆ.

Tags:
error: Content is protected !!